` ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ..? - ಜಗ್ಗೇಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
Jaggesh, Arjun Sarja Image
Jaggesh, Arjun Sarja

ಮೀಟೂ ಅಭಿಯಾನ, ಅರ್ಜುನ್ ಸರ್ಜಾ ವಿರುದ್ಧದ ಶೃತಿ ಹರಿಹರನ್ ಆರೋಪಗಳಲ್ಲಿ ಜಗ್ಗೇಶ್ ನಿಂತಿರುವುದು ಅರ್ಜುನ್ ಸರ್ಜಾ ಪರ. ಶೃತಿ ಹರಿಹರನ್, ಅರ್ಜುನ್ ಸರ್ಜಾ ಅವರ 34 ವರ್ಷಗಳ ವೃತ್ತಿ ಜೀವನವನ್ನ ಒಂದೇ ಮಾತಿನಲ್ಲಿ ಹಾಳು ಮಾಡಿದ್ದಾರೆ. ನಾನು ನೋಡಿರುವಂತೆ ಅರ್ಜುನ್, ರಾಜ್, ವಿಷ್ಣು ಅವಂತೆಯೇ ಸುಸಂಸ್ಕøತ ವ್ಯಕ್ತಿ. ಏಕವಚನದಲ್ಲಿ ಕೂಡಾ ಮಾತನಾಡಿಸುವವರಲ್ಲ. ಅಂತಹವರ ವಿರುದ್ಧ ಶೃತಿ ಆರೋಪ ಮಾಡಿರುವುದು ಸರಿಯಲ್ಲ. ಇಷ್ಟಕ್ಕೂ ತೊಂದರೆಯಾಗಿದ್ದರೆ, ಆ ದಿನವೇ ಪ್ರಶ್ನಿಸಬಹುದಿತ್ತು. ವಿಷಯ ಬಹಿರಂಗಪಡಿಸಬೇಕಿತ್ತು. ಆಗ ಏನನ್ನೂ ಮಾಡದೆ, ಈಗ ನನಗೆ ಹಂಗಾಯ್ತು.. ಹಿಂಗಾಯ್ತು.. ಎಂದರೆ ಹೇಗೆ ಎಂದಿದ್ದಾರೆ ಜಗ್ಗೇಶ್. 

ಅರ್ಜುನ್ ಸರ್ಜಾ ಕ್ಷಮೆ ಕೇಳಬೇಕಿತ್ತು ಎಂದು ಪ್ರಕಾಶ್ ರೈ ಹೇಳಿರುವ ಮಾತಿಗೆ ಜಗ್ಗೇಶ್ ಅರ್ಜುನ್ ಸರ್ಜಾ ಸ್ಲಂನಿಂದ, ಪ್ರಕಾಶ್ ರೈ ದೇವಲೋಕದಿಂದ ಬಂದೋವ್ರಾ ಎನ್ನುವ ಮೂಲಕ ಲೇವಡಿ ಮಾಡಿದ್ದಾರೆ.

 

Geetha Movie Gallery

Adhyaksha In America Audio Release Images