ಮೀಟೂ ಅಭಿಯಾನ, ಶೃತಿ ಹರಿಹರನ್ ಆರೋಪಗಳ ಕುರಿತಂತೆ ಬೆಂಬಲವಾಗಿ ನಿಂತಿದ್ದಾರೆ. ಶೃತಿ ಹರಿಹರನ್ ಅವರ ಬಾಯಿ ಮುಚ್ಚಿಸುವ ಕೆಲಸ ನಡೆಯುತ್ತಿದೆ ಎಂದಿರುವ ಪ್ರಕಾಶ್ ರೈ, ನಾನು ಅರ್ಜುನ್ ಸರ್ಜಾ ತಪ್ಪು ಮಾಡಿದ್ದಾರೆ ಎಂದು ಹೇಳುತ್ತಿಲ್ಲ. ಆದರೆ, ಕೆಲವು ಬಾರಿ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳಾಗಿರುತ್ತವೆ. ಗೊತ್ತಿದ್ದೋ.. ಗೊತ್ತಿಲ್ಲದೆಯೋ.. ಯಾವುದೋ ಒಂದು ಸ್ಪರ್ಶ ನಾಯಕಿಗೆ ಕೆಟ್ಟದ್ದು ಎನಿಸಿರಬಹುದು. ನಾಯಕನಿಗೂ ಅನ್ನಿಸಿರಬಹುದು. ಇದನ್ನು ಹೇಳಿದಾಗ.. ಹೌದೇ.. ಹಾಗಿದ್ದರೆ, ಅದು ಉದ್ದೇಶಪೂರ್ವಕವಾಗಿರಲಿಲ್ಲ.
ನನಗೆ ಗೊತ್ತೂ ಆಗಲಿಲ್ಲ ಎನ್ನುವುದಕ್ಕೆ ಅಹಂಕಾರ ಯಾಕೆ ಅಡ್ಡಿಬರಬೇಕು ಎಂದಿದ್ದಾರೆ ಪ್ರಕಾಶ್ ರೈ.