` ಚೀಪ್ ಪುಟಗೋಸಿ ಪಬ್ಲಿಸಿಟಿ ಬೇಕಿಲ್ಲ - ಪ್ರಶ್ನಿಸಿದವರಿಗೆ ಸಂಜನಾ ತಿರುಗೇಟು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sanjjana galrani reacts to netixens comments
Sanjana Galrani

ಗಂಡ ಹೆಂಡತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಸಂಜನಾ ಗರ್ಲಾನಿ, ಗಂಡ ಹೆಂಡತಿ ಚಿತ್ರದ ನಿರ್ದೇಶಕ ರವಿ ಶ್ರೀವತ್ಸ ವಿರುದ್ಧ ಮೀಟೂ ಆರೋಪ ಮಾಡಿದ್ದರು. ನನಗಾಗ ಇನ್ನೂ ಚಿಕ್ಕ ವಯಸ್ಸು. ಕೇವಲ ಒಂದು ಕಿಸ್ಸಿಂಗ್ ಸೀನ್ ಇದೆ ಎಂದು ಹೇಳಿ 10ಕ್ಕೂ ಹೆಚ್ಚು ಕಿಸ್ಸಿಂಗ್ ಸೀನ್ ಮಾಡಿಸಿದ್ದರು. ಭಯದ ವಾತಾವರಣದಲ್ಲೇ ನಾನು ನಟಿಸಿದ್ದೆ ಎಂದು ಹೇಳಿಕೊಂಡಿದ್ದರು. ಸಂಜನಾ ಆರೋಪಕ್ಕೆ ನೆಟ್ಟಿಗರು ಈಗ ಅವಕಾಶಗಳಿಲ್ಲದ ಕಾರಣಕ್ಕೆ ಈ ಮಾತನಾಡುತ್ತಿದ್ದೀಯಾ ಎಂದು ಕೆಣಕಿದ್ದರು. ಹಾಗೆ ಕೆಣಕಿದವರಿಗೆಲ್ಲ ಉತ್ತರ ಕೊಟ್ಟಿದ್ದಾರೆ ಸಂಜನಾ.

ನಿಮ್ಮ ಕಮೆಂಟ್‍ಗಳನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ದಂಡುಪಾಳ್ಯದಲ್ಲಿ ನಾನು ಬ್ಯಾಕ್‍ಲೆಸ್ ಆಗಿ ನಟಿಸಿದ್ದೆ. ಅದು ಒಂದು ವಾರ ಹೆಡ್‍ಲೈನ್ ಆಗಿತ್ತು. ನಾನು ಸ್ಕರ್ಟ್ ಮತ್ತು ಟಾಪ್ ಇಲ್ಲದೆ ನಟಿಸಿದ್ದೆ. ಅದನ್ನು ಡಿಜಿಟಲ್ ಆಗಿ ತೋರಿಸಲಾಗಿತ್ತು. 

ಇನ್ನು ನನಗೆ ಅವಕಾಶ ಇಲ್ಲ ಎನ್ನುತ್ತಿದ್ದೀರಿ. ನಾನು ಬಾಹುಬಲಿ ನಿರ್ಮಾಪಕರ 4 ಭಾಷೆಗಳಲ್ಲಿ ಬರುತ್ತಿರುವ ಮೆಗಾ ಬಜೆಟ್ ಶೋನಲ್ಲಿ ನಟಿಸುತ್ತಿದ್ದೇನೆ. ತೆಲುಗಿನಲ್ಲಿ ಸ್ವರ್ಣಖಡ್ಗಂ, ತಮಿಳಿನಲ್ಲಿ ಇಳಯತಳಪತಿ, ಬೆಂಗಾಲಿಯಲ್ಲಿ ಶೋನಾ ತಲ್ವಾರ್, ಒಡಿಯಾದಲ್ಲಿ ಸ್ವರ್ಣಖಡ್ಗ. ಅದು ವೀರರಾಣಿಯ ಪಾತ್ರ.

ನಾನು ಪ್ರಭಾಸ, ಮೋಹನ್‍ಲಾಲ್, ಮಮ್ಮೂಟಿ, ಶಿವಣ್ಣ, ದರ್ಶನ್ ಸರ್, ಪವನ್ ಕಲ್ಯಾಣ್ ಸರ್.. ಮುಂತಾದವರ ಜೊತೆಗೆಲ್ಲ ನಟಿಸಿದ್ದೇನೆ. 45 ಚಿತ್ರಗಳಾಗಿವೆ. 

ನನಗೆ ಇಂತಹ ಚೀಪ್ ಪುಟಗೋಸಿ ಪಬ್ಲಿಸಿಟಿ ಬೇಕಿಲ್ಲ. ಚಿತ್ರರಂಗ ನಿಜಕ್ಕೂ ಒಂದು ಅದ್ಭುತ ಕ್ಷೇತ್ರ. ನನಗೆ ಆಗಿರುವುದು ಒಂದು ಕೆಟ್ಟ ಅನುಭವ. ಅದನ್ನು ನಾನು ಹೇಳಿಕೊಂಡಿದ್ದೇನೆ ಎಂದಿದ್ದಾರೆ ಸಂಜನಾ. 

ಪೊಲೀಸರ ಬಳಿ ಹೋಗಿ ದೂರು ಕೊಡಿ ಅಂತೀರಿ. ಅಲ್ಲಿಗೆ ಹೋದರೆ ಐದಾರು ವರ್ಷ ಅಲೆಯಬೇಕು. ಆಗ ನನ್ನ, ನನ್ನ ಕುಟುಂಬವನ್ನ ಸಾಕೋರು ಯಾರು..? ಇದು ಸಂಜನಾ ಕೇಳ್ತಿರೋ ಪ್ರಶ್ನೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery