ಅರ್ಜುನ್ ಸರ್ಜಾ ಅವರ ಅತಿ ದೊಡ್ಡ ಹಿಟ್ಗಳಲ್ಲಿ ಒಂದು ಪ್ರತಾಪ್. ಪ್ರೇಮ ಬರಹ ಕೋಟಿ ತರಹ.. ಹಾಡು ಅದೇ ಚಿತ್ರದ್ದು. ಆ ಚಿತ್ರದಲ್ಲಿ ಅರ್ಜುನ್ ಸರ್ಜಾಗೆ ಜೊತೆಯಾಗಿದ್ದವರು ಕನ್ನಡಿಗರ ಮನ ಮೆಚ್ಚಿದ ಹುಡುಗಿ ಸುಧಾರಾಣಿ. ಅರ್ಜುನ್ ಜೊತೆ ಹಲವು ಚಿತ್ರಗಳಲ್ಲಿ ನಟಿಸಿರುವ ಸುಧಾರಾಣಿ, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಜೊತೆ ಅಭಿನಯಿಸಿದ್ದೇನೆ. ನನಗೆ ಅವರಿಂದ ಯಾವತ್ತೂ ಕೆಟ್ಟ ಅನುಭವವಾಗಿಲ್ಲ. ನನಗೆ ಗೊತ್ತಿರುವಂತೆ ಅವರೊಬ್ಬ ಸಜ್ಜನ ವ್ಯಕ್ತಿ. ಇದೇ ಮೊದಲ ಬಾರಿಗೆ ಅವರ ಮೇಲೆ ಇಂಥಾದ್ದೊಂದು ಆರೋಪ ಕೇಳಿ ಬಂದಿದೆ. ಅವರು ಈ ಆರೋಪದಿಂದ ಮುಕ್ತರಾಗುತ್ತಾರೆ. ಚಿತ್ರರಂಗದ ಹಿರಿಯರು, ಇದೆಲ್ಲವನ್ನೂ ನೋಡಿಕೊಳ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ ಸುಧಾರಾಣಿ.