` ತೇಜೋವಧೆ ಮಾಡಿದವರ ವಿರುದ್ಧ ಪೊಲೀಸರಿಗೆ ಪ್ರೇಮ್ ದೂರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jogi prem drags 9 people to police station
Jogi Prem

ದಿ ವಿಲನ್ ಚಿತ್ರದ ಬಿಡುಗಡೆ ನಂತರ ಕೇಳಿ ಬಂದ ಟೀಕೆಗಳನ್ನು ನಿರ್ದೇಶಕ ಪ್ರೇಮ್ ಸ್ವಾಗತಿಸಿದ್ದಾರೆ. ಅಭಿಮಾನಿಗಳ ಆಕ್ರೋಶಕ್ಕೆ ಸಂಯಮದಿಂದಲೇ ಉತ್ತರವನ್ನೂ ಕೊಟ್ಟಿದ್ದಾರೆ. ಟೀಕೆ ಮಾಡಲು ನೀವು ಸ್ವತಂತ್ರರು ಎನ್ನುತ್ತಲೇ, ನಾನೇಕೆ ಅಂತಹ ದೃಶ್ಯಗಳನ್ನು ಮಾಡಿದ್ದೇನೆ ಎಂಬ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಇದುವರೆಗೆ ಪ್ರೇಮ್ ತಮ್ಮ ವಿರುದ್ಧದ ಟೀಕೆಗಳಿಗೆ ತಾಳ್ಮೆ ಕಳೆದುಕೊಂಡಿದ್ದು ಕಡಿಮೆ. ಟೀಕೆ, ಲೇವಡಿಗಳನ್ನೂ ನಗುನಗುತ್ತಲೇ ಸ್ವೀಕರಿಸುತ್ತಿದ್ದ ಪ್ರೇಮ್, ಈ ಬಾರಿ ಸಿಟ್ಟಾಗಿದ್ದಾರೆ. 

ಕೆಲವು ಅಭಿಮಾನಿಗಳು ದಿ ವಿಲನ್ ಟೀಕಿಸುವ ಭರದಲ್ಲಿ ಪ್ರೇಮ್ ಅವರನ್ನು ವೈಯಕ್ತಿಕವಾಗಿ ತೇಜೋವಧೆ ಮಾಡಿರುವುದು ಅವರನ್ನು ಕೆರಳಿಸಿಬಿಟ್ಟಿದೆ. ಹಾಗೆ ತಮ್ಮನ್ನು ವೈಯಕ್ತಿಕ ತೇಜೋವಧೆ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ಕೊಡಲು ನಿರ್ಧರಿಸಿದ್ದಾರೆ ಪ್ರೇಮ್. ಹಾಗೆ ವೈಯಕ್ತಿಕ ತೇಜೋವಧೆ ಮಾಡಿದ 9 ಮಂದಿಯನ್ನು ಪ್ರೇಮ್ ಗುರುತಿಸಿದ್ದು, ಇಂದು ರವಿ ಡಿ. ಚನ್ನಣ್ಣನವರ್ ಅವರಿಗೆ ದೂರು ಸಲ್ಲಿಸಲಿದ್ದಾರೆ.

Adhyaksha In America Success Meet Gallery

Ellidhe Illitanaka Movie Gallery