` ಜೋಗಿ ಪ್ರೇಮ್‍ಗೆ ಧೈರ್ಯ ಹೇಳಿದ ಕಿಚ್ಚ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep wishes prem
Sudeep, Prem

ದಿ ವಿಲನ್ ಚಿತ್ರದ ಸಕ್ಸಸ್ ಖುಷಿಯಲ್ಲಿರುವ ನಿರ್ದೇಶಕ ಜೋಗಿ ಪ್ರೇಮ್, ಅಷ್ಟೇ ಪ್ರಮಾಣದ ಟೀಕೆಯನ್ನೂ ಎದುರಿಸುತ್ತಿದ್ದಾರೆ. ಹೀಗೆ ಟೀಕೆ ಎದುರಿಸುತ್ತಿದ್ದ ವೇಳೆಯಲ್ಲೇ ಪ್ರೇಮ್‍ಗೆ ಹುಟ್ಟುಹಬ್ಬದ ಸಂಭ್ರಮ. ಆ ಸಂಭ್ರಮಕ್ಕೆ ವಿಶ್ ಮಾಡಿರುವ ಕಿಚ್ಚ ಸುದೀಪ್, ಧೈರ್ಯವನ್ನೂ ತುಂಬಿದ್ದಾರೆ.

`ಹುಟ್ಟುಹಬ್ಬದ ಶುಭಾಶಯಗಳು ಪ್ರೇಮ್. ಇಡೀ ವರ್ಷ ನಿನಗೆ ಶುಭವಾಗಲಿ. ಸದಾ ನಗುನಗುತ್ತಲೇ ಇರಿ. ಮರೆಯಬೇಡ.. ನೀನು ಯಾವಾಗ್ಯಾವಾಗ ದಾಳಿಗೆ ಒಳಗಾಗುತ್ತೀಯೋ.. ಆಗೆಲ್ಲ ನೀನು ಗಮನ ಸೆಳೆಯುವಂತಹ ಕೆಲಸ ಮಾಡುತ್ತಲೇ ಇರುತ್ತೀಯ ಎಂದರ್ಥ. ಈ ಹಂತವನ್ನು ಎಂಜಾಯ್ ಮಾಡು. ಸಕ್ಸಸ್‍ನ ಖುಷಿ ಅನುಭವಿಸು'

ಇದು ಪ್ರೇಮ್‍ಗೆ ಕಿಚ್ಚ ಹೇಳಿರುವ ಧೈರ್ಯ ಮತ್ತು ಹುಟ್ಟುಹಬ್ಬದ ಶುಭಾಶಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery