` ಸಾಕ್ಷಿ ಇದೆ.. ಕೋರ್ಟ್‍ನಲ್ಲಿ ತೋರಿಸ್ತೇನೆ - ಶೃತಿ ಹರಿಹರನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sruthi hariharan says she has proof
Sruthi Hariharan

ಅರ್ಜುನ್ ಸರ್ಜಾ ವಿರುದ್ಧ ಕಿರುಕುಳದ ಆರೋಪ ಮಾಡಿರುವ ಶೃತಿ ಹರಿಹರನ್, ಅರ್ಜುನ್ ಸರ್ಜಾ ವಿರುದ್ಧದ ಆರೋಪಕ್ಕೆ ಸಾಕ್ಷಿಗಳನ್ನೂ ಇಟ್ಟುಕೊಂಡಿದ್ದಾರಂತೆ. ಸುದ್ದಿಗೋಷ್ಟಿಯಲ್ಲಿ ಅರ್ಜುನ್ ಸರ್ಜಾ ಅವರ ಹೆಸರನ್ನೇ ಹೇಳೋಕೆ ಕಾರಣಗಳೂ ಇವೆ ಎಂದ ಶೃತಿ, ಅದನ್ನು ನಾನು ಕೋರ್ಟ್‍ನಲ್ಲೇ ಹೇಳುತ್ತೇನೆ. ಇಲ್ಲಿ ಬಹಿರಂಗಪಡಿಸುವುದಿಲ್ಲ ಎಂದಿದ್ದಾರೆ.

ಹಾಗಂತ ಅರ್ಜುನ್ ಸರ್ಜಾ, ಶೃತಿಗೆ ಯಾವುದೇ ಮೆಸೇಜ್ ಅಥವಾ ವಾಟ್ಸಪ್ ಮಾಡಿಲ್ಲ. ಅಂತಹ ಮೆಸೇಜ್‍ಗಳಿಲ್ಲ. ಆದರೆ, ಸಾಕ್ಷಿಗಳಿವೆ. ಅವುಗಳನ್ನು ಸಮಯ ಬಂದಾಗ ಕೋರ್ಟಿನಲ್ಲೇ ತೋರಿಸುತ್ತೇನೆ ಎಂದಿದ್ದಾರೆ ಶೃತಿ ಹರಿಹರನ್.

ಶೃತಿ ಹರಿಹರನ್ ಅವರ ಜೊತೆ ಫೈರ್ ಸಂಘಟನೆಯ ಚೇತನ್, ಕವಿತಾ ಲಂಕೇಶ್ ಸೇರಿದಂತೆ ಹಲವು ಸದಸ್ಯರಿದ್ದರು. ನಾನು ಸುದೀಪ್, ದರ್ಶನ್‍ರಂತಹ ದೊಡ್ಡ ಸ್ಟಾರ್‍ಗಳ ಜೊತೆಯಲ್ಲೂ ನಟಿಸಿದ್ದೇನೆ. ನನಗೆ ಅವರ ಜೊತೆ ಇಂತಹ ಕೆಟ್ಟ ಅನುಭವಗಳಾಗಿಲ್ಲ ಎನ್ನುವುದು ಶೃತಿ ಹರಿಹರನ್ ಮಾತು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery