` ಶನೇಶ್ವರನ ಸನ್ನಿಧಿಯಲ್ಲಿ ದರ್ಶನ್ ತುಲಾಭಾರ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's special pooja in shani temple
Darshan

ಚಾಲೆಂಜಿಂಗ್ ಸ್ಟಾರ್ ದರ್ಶನ್, ಪಾಂಡಿಚೆರಿಯ ತಿರುನಲ್ಲರ್ ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಅಪಘಾತದ ನಂತರ ಚೇತರಿಸಿಕೊಂಡಿರುವ ದರ್ಶನ್, ಶನೇಶ್ವರನ ಸನ್ನಿಧಿಯಲ್ಲಿ ತುಲಾಭಾರವನ್ನೂ ಮಾಡಿಸಿದ್ದಾರೆ.

ಇಲ್ಲಿನ ದೇವಾಲಯವು ಅತ್ಯಂತ ಪ್ರತಿಷ್ಠಿತವಾಗಿದ್ದು, ಶನಿಮಹಾರಾಜನ ವಕ್ರದೃಷ್ಟಿಗೆ ಬಿದ್ದಿದ್ದ ನಳಮಹಾರಾಜನು, ಇಲ್ಲಿಯೇ ಶನಿ ದೆಸೆಯಿಂದ ಮುಕ್ತನಾದನಂತೆ. ಹೀಗಾಗಿಯೇ ಇಲ್ಲಿ ನಳ ತೀರ್ಥ ಎಂಬ ಕಲ್ಯಾಣಿ ಇದೆ. ಈ ನಳ ತೀರ್ಥದಲ್ಲಿ ಮಿಂದು, ಒದ್ದೆ ಬಟ್ಟೆಯಲ್ಲಿಯೇ ಶನೇಶ್ವರನ ದರ್ಶನ ಮಾಡಿದರೆ ಶನಿದೆಸೆಯಿಂದ ಮುಕ್ತನಾಗಬಹುದು ಎನ್ನುವುದು ನಂಬಿಕೆ.

ಈ ದೇವಾಲಯದಲ್ಲಿಯೇ ಶನಿವಾರದಂದೇ ದರ್ಶನ್ ಈ ದೇಗುಲಕ್ಕೆ ಭೇಟಿ ನೀಡಿ, ನಳ ತೀರ್ಥದಲ್ಲಿ ಮಿಂದು ಪೂಜೆ ಮಾಡಿಸಿದ್ದಾರೆ. ತುಲಾಭಾರವನ್ನೂ ಮಾಡಿಸಿದ್ದಾರೆ.

Yajamana Movie Gallery

Bazaar Movie Gallery