` ಹೊಸ ಹಾಡಿಗೆ ಹರಿಕೃಷ್ಣ ಪುತ್ರ ಕಿಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kiss image
Chethan Kumar, Bhuvan Gowda

ಕಿಸ್. ಎ.ಪಿ.ಅರ್ಜುನ್ ನಿರ್ದೇಶನದ ಸಿನಿಮಾ. ಯೂಥ್‍ಫುಲ್ ಲವ್‍ಸ್ಟೋರಿಯೊಂದನ್ನು ಹೇಳುತ್ತಿರುವ ಅರ್ಜುನ್, ಪ್ರೀತಿಯ 7 ಮೆಟ್ಟಿಲುಗಳನ್ನು ವರ್ಣಿಸುವ ಹಾಡನ್ನು 7 ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ. ಪ್ರೇಮದ ಸ್ಮಾರಕ ತಾಜ್‍ಮಹಲ್ ಎದುರು, ನಾಯಕ ನಾಯಕಿಯ ಕಿಸ್ಸಿಂಗ್ ಸೀನ್ ಚಿತ್ರೀಕರಿಸಲಾಗಿದೆ. ವಿರಾಟ್ & ಶ್ರೀಲೀಲ ಪ್ರಧಾನ ಪಾತ್ರದಲ್ಲಿರುವ ಚಿತ್ರದ ಈ ಹಾಡಿನ ಇನ್ನೊಂದು ಸ್ಪೆಷಲ್, ಆದಿಯ ಸಂಗೀತ ನಿರ್ದೇಶನ.

ಆದಿ, ಹರಿಕೃಷ್ಣ ಅವರ ಪುತ್ರ. ಅಪ್ಪನ ಹಾದಿಯಲ್ಲೇ ಸಂಗೀತದಲ್ಲೇ ಮುಳುಗಿರುವ ಆದಿ, ಈ ಹಾಡಿಗೆ ಮೆಲೋಡಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಹಾಡು ಮತ್ತು ಹಾಡಿನ ಸಂಗೀತ ಸ್ಪೆಷಲ್ಲಾಗಿದೆ ಎಂದು ಆದಿಯ ಬೆನ್ನು ತಟ್ಟಿದ್ದಾರೆ ನಿರ್ದೇಶಕ ಎ.ಪಿ.ಅರ್ಜುನ್.

ಈ ಪ್ರೇಮಮಯ ಹಾಡನ್ನು ತಾಜ್‍ಮಹಲ್, ಜೈಸಲ್ಮೇರ್, ಜೋಧ್‍ಪುರ, ಕಿಷನ್‍ಗಡ, ಕುದುರೆಮುಖ, ಚಿಕ್ಕಮಗಳೂರು ಹಾಗೂ ಕೇರಳದ ಜಲಪಾತದಲ್ಲಿ ಚಿತ್ರೀಕರಿಸಲಾಗಿದೆಯಂತೆ.

Ayushmanbhava Movie Gallery

Ellidhe Illitanaka Movie Gallery