` ದಾರಿ ತಪ್ಪಿದ ರಾಮ್‍ಕುಮಾರ್ ಮಗ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramkumar's son movie daari thappidha maga
Daari Thappida Maga

ದಾರಿ ತಪ್ಪಿದ ಮಗ. ಡಾ.ರಾಜ್‍ರ ಸ್ಮರಣೀಯ ಸಿನಿಮಾಗಳಲ್ಲಿ ಒಂದು. ಈಗ ಅದೇ ಹೆಸರಿನಲ್ಲಿ ಹೊಸದೊಂದು ಸಿನಿಮಾ ಸೆಟ್ಟೇರುತ್ತಿದೆ. ದಾರಿ ತಪ್ಪುತ್ತಿರೋದು ಡಾ.ರಾಜ್‍ರ ಮೊಮ್ಮಗ. ರಾಜ್‍ರ ಮಗಳು ಪೂರ್ಣಿಮಾ ಹಾಗೂ ರಾಮ್‍ಕುಮಾರ್ ಅವರ ಪುತ್ರ ಧಿರೇನ್.

ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ಸಾಗುತ್ತಿದ್ದು, ಅನಿಲ್ ಕುಮಾರ್ ನಿರ್ದೇಶನವಿದೆ. ಮೈ ನೇಮ್ ಈಸ್ ಕಿರಾತಕ ಚಿತ್ರದಲ್ಲಿ ಬ್ಯುಸಿಯಾಗಿರೋ ಅನಿಲ್, ಆ ಚಿತ್ರದ ನಂತರ ದಾರಿ ತಪ್ಪಿದ ಮಗ ಚಿತ್ರದ ನಿರ್ದೇಶನ ಶುರು ಮಾಡಲಿದ್ದಾರೆ.

ಡಾ.ರಾಜ್ ಮೊಮ್ಮಗನ ಮೊದಲ ಚಿತ್ರಕ್ಕೆ ಬಂಡವಾಳ ಹೂಡುತ್ತಿರೋದು ಖ್ಯಾತ ನಿರ್ಮಾಪಕ ಜೋಡಿ ಜಯಣ್ಣ ಮತ್ತು ಭೋಗೇಂದ್ರ.

Trayambakam Movie Gallery

Rightbanner02_butterfly_inside

Paddehuli Movie Gallery