` ವಿಲನ್ ಚೆನ್ನಾಗಿಲ್ಲ ಎಂದವರಿಗೆ ಸುದೀಪ್ ಹೇಳಿದ್ದೇನು..? - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
sudeep replies to people who disliked the villain
Sudeep

ದಿ ವಿಲನ್. ರಾಜ್ಯಾದ್ಯಂತ ರಿಲೀಸ್ ಆಗಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಶಿವಣ್ಣ ಮತ್ತು ಸುದೀಪ್ ಅಭಿಮಾನಿಗಳಿಬ್ಬರೂ ಖುಷಿಯಾಗಿದ್ದಾರೆ. ತಾಯಿಯ ಸೆಂಟಿಮೆಂಟ್ ಪ್ಲೇ ಮಾಡಿರುವ ಜೋಗಿ ಪ್ರೇಮ್ ಗೆದ್ದುಬಿಟ್ಟಿದ್ದಾರೆ. ಸಿ.ಆರ್. ಮನೋಹರ್ ಮುಖದಲ್ಲಿ ಗೆಲುವಿನ ಸಂಭ್ರಮ. ಅಭಿಮಾನಿಗಳ ಶಿಳ್ಳೆ ಚಪ್ಪಾಳೆಯ ನಡುವೆ ವಿಲನ್ ಹ್ಯಾಪಿ ಹ್ಯಾಪಿ.

ಹಾಗಂತ ಎಲ್ಲರೂ ಖುಷಿಯಾಗಿದ್ದಾರೆ ಎಂದರ್ಥವಲ್ಲ. ಇಡೀ ಸಿನಿಮಾ ಸ್ವಲ್ಪವೂ ಚೆನ್ನಗಿಲ್ಲ ಎಂದು ದೂರಿದವರೂ ಇದ್ದಾರೆ. ಅಂಥವರಿಗೆಲ್ಲ ಸುದೀಪ್ ಕೊಟ್ಟಿರೋ ಉತ್ತರ ಇದು.

ಒಂದು ಹೋಟೆಲ್‍ಗೆ ಪ್ರತಿದಿನ ತುಂಬಾ ಜನ ಬರ್ತಾರೆ. ಕೆಲವರು ದೋಸೆ ಸರಿಯಿಲ್ಲ ಅಂತಾರೆ. ಇನ್ನೂ ಕೆಲವರು ಇಡ್ಲಿ ಸರಿಯಿಲ್ಲ ಅಂತಾರೆ. ಮತ್ತೂ ಕೆಲವರು ಚಟ್ನಿ ಸರಿಯಿಲ್ಲ ಅಂತಾರೆ. ಹಾಗೆ ಕಮೆಂಟ್ ಮಾಡುವವರ ಬಗ್ಗೆ ಹೋಟೆಲ್ ಮಾಲೀಕ ತಲೆಕೆಡಿಸಿಕೊಳ್ಳಲ್ಲ. ದಿನದ ಕೊನೆಗೆ ವ್ಯವಹಾರ ಎಷ್ಟಾಯ್ತು ಅಂತಾ ನೋಡ್ತಾನೆ. ಹಾಗೆ ಟೀಕಿಸುವವರು ಕೂಡಾ ಮತ್ತೊಮ್ಮೆ ಅದೇ ಹೋಟೆಲ್‍ಗೆ ಬರ್ತಾರೆ. ಹೀಗೆ ಹೇಳಿರುವ ಸುದೀಪ್, ಇದೇ ಚಿತ್ರದ ಬಗ್ಗೆ ಲಕ್ಷಾಂತರ ಜನ ನೋಡಿ ಥ್ರಿಲ್ಲಾಗಿರುವುದನ್ನು ಮರೆಯಬೇಡಿ. ಚಿತ್ರವನ್ನು ಮೆಚ್ಚಿಕೊಂಡಿರುವವರೇ ಹೆಚ್ಚು ಎಂದೂ ಹೇಳಿದ್ದಾರೆ.

Trayambakam Movie Gallery

Rightbanner02_butterfly_inside

Paddehuli Movie Gallery