` #me too ಅನುಭವ ಹೇಳಿ ಚಿತ್ರರಂಗ ತೊರೆದ ಸಂಗೀತಾ ಭಟ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sangeetha bhat talks about her me too expeienece, quits industry
Sangeetha Bhat

ಸ್ಯಾಂಡಲ್‍ವುಡ್‍ನಲ್ಲೂ #me too ಸಂಚಲನ ಸೃಷ್ಟಿಸೋಕೆ ಶುರುವಾಗಿದೆ. #me too ಬಿರುಗಾಳಿ ಎದ್ದ ಮೇಲೆ ನಟಿ ಸಂಗೀತಾ ಭಟ್, ತಮಗಾದ ಅನುಭವ ಹೊರಹಾಕಿದ್ದಾರೆ. ರಘು ದೀಕ್ಷಿತ್ ಮೇಲಿನ ಆರೋಪದ ನಂತರ ಹೊರಬಿದ್ದಿರುವ 2ನೇ ಪ್ರಕರಣ ಇದು. ಎರಡನೇ ಸಲ, ದಯವಿಟ್ಟು ಗಮನಿಸಿ, ಅನುಕ್ತ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಸಂಗೀತಾ ಭಟ್, ತಮಗಾದ ಲೈಂಗಿಕ ಕಿರುಕುಳದ ಕಥೆ ಹೇಳಿಕೊಂಡು ಬಣ್ಣದ ಲೋಕಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಚಿತ್ರರಂಗದಿಂದ ಹೊರಬಂದಿರುವ ಕಾರಣಕ್ಕಾಗಿಯೇ ಈಗ ಧೈರ್ಯದಿಂದ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದೇನೆ ಎಂದಿರುವ ಸಂಗೀತಾ ಭಟ್, ನಾನು ಯಾರ ಹೆಸರನ್ನೂ ಹೇಳುವುದಿಲ್ಲ. ತನಗೆ ಕಿರುಕುಳ ನೀಡಿದವರ ಕುಟುಂಬದವರಿಗೆ ನೋವಾಗಬಾರದು ಎಂದಿದ್ದಾರೆ. ಸುದೀರ್ಘವಾಗಿ ಅನುಭವ ಹೇಳಿಕೊಂಡಿರುವ ಸಂಗೀತಾ ಭಟ್, ಎಲ್ಲಿಯೂ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ.

ಸಂಗೀತಾ ಭಟ್ #me too  ಆರೋಪಗಳು : 

2008ರಲ್ಲಿ ಕಾಸ್ಟ್ಯೂಮ್ ಡೈರೆಕ್ಟರ್ ಒಬ್ಬರು, ಕಾಸ್ಟ್ಯೂಮ್ ಟೆಸ್ಟ್‍ಗೆ ಕರೆದೊಯ್ದು ಕಿರುಕುಳ ಕೊಟ್ಟಿದ್ದರಂತೆ. ನಿರ್ಜನ ಪ್ರದೇಶವೊಂದರಲ್ಲಿ ಕಾರು ನಿಲ್ಲಿಸಿ ಮೈಯೆಲ್ಲಾ ಮುಟ್ಟಿದ್ದರು. ಇವೆಲ್ಲ ಚಿತ್ರರಂಗದಲ್ಲಿ ಕಾಮನ್ ಎಂದಿದ್ದರು. ನಂತರ ಆಫೀಸ್‍ಗೆ ಹೋದಾಗ ಡೈರೆಕ್ಟರ್ ಕಾಸ್ಟ್ಯೂಮ್ ನೋಡುವ ನೆಪದಲ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಮೈಯ್ಯೆಲ್ಲ ಮುಟ್ಟಿದ್ದರು. ನಾನು ಹೆದರಿ ಅಲ್ಲಿಂದ ಓಡಿ ಬಂದಿದ್ದೆ.

2009ರಲ್ಲಿ ಪ್ರಸಿದ್ಧ ನಿದೇಶಕರು ಹಾಗೂ ಸಹಾಯಕ ನಿರ್ದೇಶಕರನ್ನು ಮನೆಗೆ ಊಟಕ್ಕೆ ಕರೆದಿದ್ದೆವು. ನಾನು ಅವರ ಚಿತ್ರಕ್ಕೆ ಆಯ್ಕೆಯಾಗಿದ್ದೆ. ಊಟಕ್ಕೆ ಬಂದಿದ್ದವರು ಅಸಭ್ಯವಾಗಿ ವರ್ತಿಸತೊಡಗಿದರು. ನಾನು ಮತ್ತು ನನ್ನ ಅಮ್ಮ ಟೆರೇಸ್‍ನಲ್ಲಿ ಅವರು ಹೋಗುವವರಗೆ ಅಡಗಿ ಕುಳಿತಿದ್ದೆವು.

2010ರಲ್ಲಿ ಲೇಡಿ ಹೇರ್‍ಡ್ರೆಸ್ಸರ್‍ವೊಬ್ಬರು ನನ್ನ ಉಡುಪಿನ ಒಳಗೆ ಕೈ ಹಾಕಿದ್ದರು. ನಾನು ಬೈದಾಗ ಕ್ಷಮೆ ಕೇಳಿದ್ದರು. ಆದರೆ ಕ್ಷಮೆ ಕೇಳಿದ್ದ ಆಕೆ ನನ್ನ ಮೇಲೆ ದ್ವೇಷ ಸಾಧಿಸಿದರು. ಪ್ರಸಿದ್ಧ ನಿರ್ದೇಶಕರೊಬ್ಬರ ಚಿತ್ರದಲ್ಲಿ ನಟಿಸುವಾಗ ಆ ನಿರ್ದೇಶಕರು ಫೋನ್ ಮಾಡಿ ರೂಮಿಗೆ ಬರುವಂತೆ ಕರೆದರು. ನಾನು ಪ್ರಶ್ನೆ ಮಾಡಿದ್ದಕ್ಕೆ ಅಮಾಯಕಳಂತೆ ಆಡಬೇಡ. ಹೇರ್‍ಡ್ರೆಸ್ಸರ್ ಎಲ್ಲವನ್ನೂ ಹೇಳಿದ್ದಾಳೆ ಎಂದಿದ್ದರು. ಅವರ ಮಗಳೂ ಕೂಡಾ ಸಿನಿಮಾದಲ್ಲಿ ಹೀರೋಯಿನ್. ಅವಳಿಗೆ ಅಂಥಾ ಪರಿಸ್ಥಿತಿ ಬರದೇ ಇರಲಿ.

2013ರಲ್ಲಿ ಸೂಪರ್ ಹಿಟ್ ಪೊಲೀಸ್ ಸಿನಿಮಾವೊಂದರ ನಿರ್ಮಾಪಕರು ನಿರ್ಮಾಪಕರು ನನ್ನ ರೂಂಮೇಟ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ನಾನು ಅವರಿಗೆ ಅಣ್ಣಾ ಎನ್ನುತ್ತಿದ್ದೆ. ರಾಕಿಯನ್ನೂ ಕಟ್ಟಿದ್ದೆ. ಅವರೇ ನನ್ನನ್ನು ನನ್ನ ಜೊತೆ ಮಲಗುವಂತೆ ಕರೆದರು. ನನಗೆ ತುಂಬಾ ಬಿಸಿನೆಸ್‍ಮನ್‍ಗಳು ಗೊತ್ತು. ಅವರ ಜೊತೆ ಕಳಿಸಿ ನಿನ್ನನ್ನು ಶ್ರೀಮಂತಳಾಗಿಸುತ್ತೇನೆ ಅಂದ್ರು.

2015-16ರಲ್ಲಿ ಪ್ರಸಿದ್ಧ ನಿರ್ದೇಶಕರೊಬ್ಬರು ನನಗೆ ಬರೆಯಲು ಸ್ಫೂರ್ತಿ. ನೀನು ಯಾವ ರೀತಿ ಡ್ರೆಸ್‍ನಲ್ಲಿದ್ದೀಯೋ.. ಅದೇ ಡ್ರೆಸ್‍ನ ಫೋಟೋ ಕಳಿಸು ಎನ್ನುತ್ತಿದ್ದರು.

2017ರಲ್ಲಿ ದೊಡ್ಡ ಸಿನಿಮಾ ನಟರೊಬ್ಬರು ನನಗೆ ಕಾಲ್ ಮಾಡಿ, ವರ್ಜಿನ್ನಾ ಎಂದು ಕೇಳಿದರು. ನನ್ನ ವರ್ಜಿನಿಟಿ ಕಳೆಯೋಕೆ ಹೆಲ್ಪ್ ಮಾಡ್ತೀಯಾ ಎಂದು ಕೇಳಿದರು. ನಾನು ಬೇರೆ ಹುಡುಗನ ಜೊತೆ ಕಮಿಟ್ ಆಗಿದ್ದೇನೆ ಎಂದಿದ್ದಕ್ಕೆ ಕಾಲ್ ಕಟ್ ಮಾಡಿದ್ರು. ಅದೇ ನಟನ ಸಂಬಂಧಿಕ ನಟರೊಬ್ಬರು ನನಗೆ ಇದೇ ರೀತಿ ಫೋನ್ ಮಾಡಿ ಹೋಟೆಲ್‍ಗೆ ಕರೆದಿದ್ದರು. ಬರಲ್ಲ ಎಂದಿದ್ದಕ್ಕೆ ನಾನು ಎಷ್ಟು ನಟಿಯರೊಂದಿಗೆ ಮಲಗಿದ್ದೇನೆ ಗೊತ್ತಾ. ಒಂದು ಮಿಸ್ ಕಾಲ್ ಕೊಟ್ಟರೆ ಅವರೆಲ್ಲ ಓಡೋಡಿ ಬರುತ್ತಾರೆ ಎಂದಿದ್ದರು.

ಹೀಗೆ ಹಲವು ಕಥೆ ಹೇಳಿಕೊಂಡಿದ್ದಾರೆ ಸಂಗೀತಾ ಭಟ್. ಆದರೆ, ಕಿರುಕುಳ ಕೊಟ್ಟವರು ಯಾರು ಎನ್ನುವ ಮಾಹಿತಿಯನ್ನು ಮಾತ್ರ ಹೇಳಿಲ್ಲ.

#

The Terrorist Movie Gallery

Thayige Thakka Maga Movie Gallery