` ಪರಶುರಾಮ.. ದೇವತಾ ಮನುಷ್ಯ.. ಜ್ವಾಲಾಮುಖಿ.. ಮುಂದ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what is the name of puneeth anandram's new film
Puneeth's New Film

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಸಂತೋಷ್ ಆನಂದ್‍ರಾಮ್ ಹಾಗೂ ಹೊಂಬಾಳೆ ಪ್ರೊಡಕ್ಷನ್ಸ್ ಕಾಂಬಿನೇಷನ್‍ನ ಸಿನಿಮಾದ ಟೈಟಲ್ ಏನು..? ನವೆಂಬರ್ 1ಕ್ಕೆ ಅಭಿಮಾನಿ ದೇವರಿಂದ ಸಿನಿಮಾ ಟೈಟಲ್ ಬಿಡುಗಡೆ ಎಂದಿದೆ ಚಿತ್ರತಂಡ. ಆದರೆ, ಗಾಂಧಿನಗರದಲ್ಲಿ ಸಿನಿಮಾದ ಟೈಟಲ್ ಕುರಿತು ಹತ್ತಾರು ಕಥೆಗಳು ಓಡಾಡುತ್ತಲೇ ಇವೆ. 

ಮೊದಲಿಗೆ ಪರಶುರಾಮ್ ಎಂಬ ಹೆಸರು ಕೇಳಿಬಂದಿತ್ತು. ನಂತರ ಅಲ್ಲ.. ದೇವತಾ ಮನುಷ್ಯ ಅನ್ನೋ ಹೆಸರು ಕಾಣಿಸಿಕೊಳ್ತು. ಈಗ ಅವೆರಡನ್ನೂ ಮೀರಿ ಜ್ವಾಲಾಮುಖಿ ಅನ್ನೋ ಹೆಸರು ಓಡಾಡುತ್ತಿದೆ. ಅಂದಹಾಗೆ ಮೂರಕ್ಕೆ ಮೂರೂ ಅಣ್ಣಾವ್ರ ಚಿತ್ರದ ಹೆಸರುಗಳೇ. ಈ ಮೂರರಲ್ಲಿ ಯಾವುದೋ ಒಂದು ಹೆಸರಿರುತ್ತೆ. ಅಥವಾ.. ನಾಲ್ಕನೇ ಹೆಸರು ಬಂದರೂ ಆಶ್ಚರ್ಯವಿಲ್ಲ.

ನವೆಂಬರ್ 1ರವರೆಗೂ ಕಾಯದೆ ವಿಧಿಯಿಲ್ಲ.

Yajamana Movie Gallery

Bazaar Movie Gallery