` ಮುರುಘಾ ಶ್ರೀಗಳು ಮದಕರಿ ವಿವಾದ ತಣ್ಣಗಾಗಿಸ್ತಾರಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
will murugha mutt cools madakari nayaka issue
Darshan, Sudeep

ಮದಕರಿ ಚಿತ್ರದ ವಿವಾದ.. ಜಾತಿ ವಿವಾದಕ್ಕೆ ತಿರುಗಿರುವುದು ಗೊತ್ತೇ ಇದೆ. ಈಗ ಆ ವಿವಾದ ಮುರುಘಾ ಶರಣರ ಮಠದ ಅಂಗಳ ತಲುಪಿದೆ. ಶರಣರ ಉತ್ಸವಕ್ಕಾಗಿ ಚಿತ್ರದುರ್ಗಕ್ಕೆ ತೆರಳಿದ್ದ ದರ್ಶನ್ ಮತ್ತು ರಾಕ್‍ಲೈನ್ ವೆಂಕಟೇಶ್, ಈ ಕುರಿತು ಮುರುಘಾ ಶ್ರೀಗಳ ಜೊತೆ ಮಾತನಾಡಿದ್ದಾರಂತೆ.

ವಾಲ್ಮೀಕಿ ಸಮುದಾಯದ ಶ್ರೀಗಳಾದ ಪ್ರಸನ್ನಾನಂದ ಸ್ವಾಮೀಜಿಗಳಿಗೆ ಮುರುಘಾ ಮಠದ ಶ್ರೀಗಳೆಂದರೆ ಅಪಾರ ಗೌರವ. ಹೀಗಾಗಿ ಮುರುಘಾ ಶರಣರ ಮೂಲಕ ವಾಲ್ಮೀಕಿ ಶ್ರೀಗಳನನ್ನು ಸುಮ್ಮನಾಗಿಸುವ ಪ್ರಯತ್ನ ಮಾಡಿದ್ದಾರಂತೆ ರಾಕ್‍ಲೈನ್ ವೆಂಕಟೇಶ್ ಮತ್ತು ದರ್ಶನ್.

ಮದಕರಿ ಸಿನಿಮಾವನ್ನು ದರ್ಶನ್ ನಾಯಕತ್ವದಲ್ಲಿ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಕೆಲಸಗಳು ಈಗಾಗಲೇ ಶುರುವಾಗಿವೆ ಎಂದಿರುವ ರಾಕ್‍ಲೈನ್ ವೆಂಕಟೇಶ್, ವಿವಾದದ ಬಗ್ಗೆ ಮಾತನಾಡುವುದಿಲ್ಲ. ಆದರೆ ವಿವಾದವನ್ನು ತಣ್ಣಗಾಗಿಸುವ ಕೆಲಸಕ್ಕೆ ಕೈ ಹಾಕಿರುವುದು ಸತ್ಯ.

Shivarjun Movie Gallery

KFCC 75Years Celebrations and Logo Launch Gallery