#me too.. ದೇಶದ ಸಿನಿಮಾ, ರಾಜಕೀಯ, ಕ್ರೀಡೆ.. ಹೀಗೆ ಎಲ್ಲ ಲೋಕದಲ್ಲೂ ದಿನಕ್ಕೊಂದು ಬಿರುಗಾಳಿ ಎಬ್ಬಿಸುತ್ತಿದೆ. ಈ ಕುರಿತು ತಾರಕಾಸುರ ಚಿತ್ರದ ನಾಯಕಿ ಮಾನ್ವಿತಾ ಹರೀಶ್ ಮಾತನಾಡಿದ್ದಾರೆ.
ಲೈಂಗಿಕ ಕಿರುಕುಳ, ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಸಿಗಬೇಕು ಎಂದಿರುವ ಮಾನ್ವಿತಾ, ವಿನಾಕಾರಣ ಆರೋಪ ಮಾಡಬಾರದು, ಪಬ್ಲಿಸಿಟಿಗೋಸ್ಕರ ಅಂತಹ ಆರೋಪ ಮಾಡಬಾರದು ಎಂದು ಕೂಡಾ ಹೇಳಿದ್ಧಾರೆ. ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡ್ತೇವೆ. ಹಾಗಂತ ರಿಯಲ್ ಲೈಫ್‍ನಲ್ಲಿ ಹಾಗೆಲ್ಲ ಇರೋಕೆ ಸಾಧ್ಯವಿಲ್ಲ ಎಂದಿರುವ ಮಾನ್ವಿತಾ ಹರೀಶ್, ಹುಡುಗ ಹುಡುಗಿಯನ್ನ ನೋಡಿದ ತಕ್ಷಣ ಅದು ಕಿರುಕುಳವಾಗೋದಿಲ್ಲ ಎಂದಿದ್ದಾರೆ. ತಾರಕಾಸುರ ಚಿತ್ರದ ಆಡಿಯೋ ಲಾಂಚ್ ವೇಳೆ, ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಮಾನ್ವಿತಾ.