` ಸಂತ್ರಸ್ತೆಯ ಪರವೇ ನಿಂತ ರಘು ದೀಕ್ಷಿತ್ ಪತ್ನಿ ಮಯೂರಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
raghu dixit's wife mayuri
Mayuri Upadhaya

me ಣoo ಬಿರುಗಾಳಿಯಲ್ಲಿ ಬೆತ್ತಲಾದ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಈ ಕುರಿತು ರಘು ದೀಕ್ಷಿತ್ ಕ್ಷಮೆ ಕೇಳಿದ್ದಾರೆ. ಸುದ್ದಿ ಹೊರಬಿದ್ದ ನಂತರ ರಘು ದೀಕ್ಷಿತ್ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಹಿಂದೆ ಜಮ್ಮು ಕಾಶ್ಮೀರದ  ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಧಾನಿ ಮೋದಿಯವರೇ.. ಈಗಲಾದರೂ ಮಾತನಾಡಿ ಎಂದು ಅಭಿಯಾನ ನಡೆಸಿದ್ದವರಲ್ಲಿ ರಘು ದೀಕ್ಷಿತ್ ಕೂಡಾ ಇದ್ದರು. ಅ ಪ್ರಕರಣವನ್ನು ನೆನಪಿಸಿ ರಘು ದೀಕ್ಷಿತ್‍ರನ್ನು ಟೀಕಿಸಲಾಗುತ್ತಿದೆ. ಹೀಗಿರುವಾಗಲೇ, ರಘು ದೀಕ್ಷಿತ್‍ರಿಂದ ಕಿರುಕುಳಕ್ಕೊಳಗಾದೆ ಎಂದು ಹೇಳಿದ್ದ ಸಂತ್ರಸ್ತೆಯ ಪರ ರಘು ದೀಕ್ಷಿತ್ ಪತ್ನಿ ಮಯೂರಿ ಉಪಾಧ್ಯ ಅವರೇ ನಿಂತಿದ್ದಾರೆ.

ನಾನು ಒಬ್ಬ ಪತ್ನಿಯಾಗುವ ಮುಂಚೆ ಹೆಣ್ಣು. ಹೆಣ್ಣಿನ ಗೌರವ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನನ್ನ ಕರ್ತವ್ಯ. ಆ ಯುವತಿ ಹಾಗೂ ನಿರ್ದಿಷ್ಟ ಘಟನೆಯ ಬಗ್ಗೆ ನನಗೆ ಗೊತ್ತಿಲ್ಲ. ಇಂತಹ ಪ್ರಕರಣಗಳಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಬೇಕು ಎಂದಿದ್ದಾರೆ ಮಯೂರಿ.

ಈ ಪ್ರಕರಣದಲ್ಲಿ ನಾವು ಡೈವೋರ್ಸ್ ತೆಗೆದುಕೊಳ್ಳುತ್ತಿರುವುದನ್ನು ತರುವ ಅಗತ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ. ಆತ್ಮಗೌರವ, ಆತ್ಮಾಭಿಮಾನ ಸೆಲಬ್ರಟಿಗಳಿಗಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನಿಗೂ ತಮ್ಮದೇ ಆದ ಆತ್ಮಗೌರವ, ಆತ್ಮಾಭಿಮಾನ ಇದ್ದೇ ಇರುತ್ತೆ. ಸತ್ಯ ಸಂಗತಿ ಹೊರಬರಲಿ ಎಂದಿದ್ದಾರೆ ಮಯೂರಿ ಉಪಾಧ್ಯಾ.

ಮಯೂರಿ ಉಪಾಧ್ಯ ಕೂಡಾ ಸೆಲೆಬ್ರಿಟಿಯೇ. ಅಂತಾರಾಷ್ಟ್ರೀಯ ಖ್ಯಾತಿ ನೃತ್ಯ ಕಲಾವಿದೆ. ವಿಶ್ವಸಂಸ್ಥೆಯಲ್ಲೂ ಕೂಡಾ ಹಲವು ಬಾರಿ ನೃತ್ಯ ಪ್ರದರ್ಶನ ನೀಡಿರುವ ಖ್ಯಾತಿ ಅವರದ್ದು. ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿರುವ ಮಯೂರಿ, 50ಕ್ಕೂ ಹೆಚ್ಚು ದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery