` ಸುರಿಯೋ ಕಣ್ಣೀರಿನ ಹಿಂದಿನ ಸ್ಕೆಚ್ಚುಗಳ ಕಥೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
story behind uriyo kanneru
Suriyo Kanneru Song

ಸುರಿಯೋ ಕಣ್ಣೀರಿನ... ಎಂದು ಶುರುವಾಗುವ ಹಾಡಿದು. ಟೆರರಿಸ್ಟ್ ಚಿತ್ರದ ಈ ಹಾಡು, ಅದನ್ನು ಚಿತ್ರಿಸಿರುವ ರೀತಿ ಎಲ್ಲರ ಗಮನ ಸೆಳೆಯುತ್ತಿದೆ. ರಾಗಿಣಿಯ ಮನೋಜ್ಞ ನಟನೆಯೂ ಗಮನ ಸೆಳೆಯುತ್ತಿದೆ. ಹಾಡು ಇಷ್ಟು ಚೆಂದವಾಗಿ ಬರಲು ಏನು ಕಾರಣ ಎಂಬುದರ ಹಿಂದಿನ ಸ್ಕೆಚ್ಚುಗಳ ಕಥೆ ಹೇಳಿದ್ದಾರೆ ನಿರ್ದೇಶಕ ಪಿ.ಸಿ.ಶೇಖರ್.

ಹಾಡು ಶೂಟ್ ಮಾಡುವ ಮೊದಲೇ ಹಾಡಿನ ಪ್ರತಿ ಫ್ರೇಮ್‍ನ್ನು ಸ್ಕೆಚ್ಚುಗಳ ಮೂಲಕ ಸಿದ್ಧ ಮಾಡಿಟ್ಟುಕೊಂಡೆವು. ಹಾಗೆಯೇ ಚಿತ್ರೀಕರಿಸಿದೆವು. ಸ್ಕೆಚ್ಚುಗಳನ್ನು ಸಿದ್ಧ ಮಾಡುವಾಗಲೇ ಇಡೀ ಹಾಡು ಹೇಗೆ ಬರಬೇಕು ಅನ್ನೋದ್ರ ಸ್ಪಷ್ಟ ಕಲ್ಪನೆ ಇತ್ತು ಎಂದಿದ್ದಾರೆ ಪಿ.ಸಿ.ಶೇಖರ್.

ಒಂದು ಹಾಡಿಗೆ ಸ್ಟೋರಿ ಬೋರ್ಡ್ ಮಾಡುವ, ಸ್ಕೆಚ್ಚುಗಳನ್ನು ಸಿದ್ಧ ಮಾಡಿಟ್ಟುಕೊಳ್ಳುವ ಪರಂಪರೆ ಮತ್ತೊಮ್ಮೆ ಶುರುವಾದಂತಿದೆ. ಅಂದಹಾಗೆ ಈ ಚಿತ್ರದಲ್ಲಿ ಹಾಡಿನಲ್ಲೂ ಕಥೆ ಮುಂದುವರೆಯುತ್ತೆ. ಅಲಂಕಾರ್ ಸಂತಾನ ನಿರ್ಮಾಣದ ಸಿನಿಮಾ, ಅಕ್ಟೋಬರ್ 18ರಂದು ರಿಲೀಸ್ ಆಗುತ್ತಿದೆ.