ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಗೆ ರೆಡಿಯಾಗುತ್ತಿದೆ. ನವೆಂಬರ್ 16ರಂದೇ ರಿಲೀಸ್ ಎಂದು ಘೋಷಿಸಿದ್ದ ಚಿತ್ರತಂಡ ಈಗ ಬಿಡುಗಡೆಯನ್ನು ಡಿಸೆಂಬರ್ 21ಕ್ಕೆ ಮುಂದೂಡಿದೆ. ಈ ಕುರಿತು ಸುದ್ದಿಗೋಷ್ಟಿ ಕರೆದಿದ್ದ ಚಿತ್ರತಂಡ ಚಿತ್ರದ ಬಿಡುಗಡೆ ಕುರಿತು ಇದ್ದ ಅನುಮಾನಗಳಿಗೆ ಉತ್ತರ ನೀಡಿದೆ. ಸಿನಿಮಾವನ್ನು ಏಕಕಾಲದಲ್ಲಿ 5 ಭಾಷೆಯಲ್ಲಿ ಬಿಡುಗಡೆ ಮಾಡುತ್ತಿರುವುದೇ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಲು ಕಾರಣ. ಇದರ ಹೊರತಾಗಿ ಮತ್ಯಾವುದೇ ಕಾರಣಗಳಿಲ್ಲ.
ಹಿಂದಿಯಲ್ಲಿ ಕೆಜಿಎಫ್ ಸಿನಿಮಾವನ್ನು ರವೀನಾ ಟಂಡನ್ ಅವರ ಪತಿ ಅನಿಲ್ ತಡಾನಿ ಹಾಗೂ ಬಾಲಿವುಡ್‍ನ ಮಿಲ್ಕಾಸಿಂಗ್ ಎಂದೇ ಖ್ಯಾತರಾಗಿರುವ ಫರ್ಹಾನ್ ಅಖ್ತರ್ ಜಂಟಿಯಾಗಿ ರಿಲೀಸ್ ಮಾಡುತ್ತಿದ್ದಾರೆ. ಇದನ್ನು ಫರ್ಹಾನ್ ಅಖ್ತರ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಹಿಂದಿಯಲ್ಲಿ ಸಿನಿಮಾ ರಿಲೀಸ್‍ಗೆ ಮುನ್ನ ಪ್ರಚಾರಕ್ಕೆ ಸ್ವಲ್ಪ ಸಮಯ ಬೇಕೆಂದು ವಿತರಕರು ಕೇಳಿಕೊಂಡ ಕಾರಣ, ಬಿಡುಗಡೆಯನ್ನು ಮುಂದಕ್ಕೆ ಹಾಕಲಾಯಿತು ಎಂದು ತಿಳಿಸಿದ್ದಾರೆ ಯಶ್.