ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಅಪಘಾತದಲ್ಲಿ ಕೈಮೂಳೆಗೆ ಪೆಟ್ಟು ಮಾಡಿಕೊಂಡು ರೆಸ್ಟ್ನಲ್ಲಿದ್ದಾರೆ. ವಿಶ್ರಾಂತಿಯ ನಡುವೆಯೂ ಗೆಳೆಯನನ್ನು ಮರೆತಿಲ್ಲ. ದರ್ಶನ್ ಗೆಳೆತನ ಎಂಥದ್ದು ಎನ್ನುವುದಕ್ಕೆ ಸಾಕ್ಷಿ, ಸೃಜ ವಿತ್ ಗಜ.
ಸೃಜನ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್ ಶೋ, 200 ಎಪಿಸೋಡ್ ಪೂರೈಸಿದೆ. ಆ 200ನೇ ಎಪಿಸೋಡ್ನ್ನು ಸ್ಮರಣೀಯವಾಗಿಸಲು ಸೃಜನ್, ಗೆಳೆಯ ದರ್ಶನ್ರನ್ನು ಆಹ್ವಾನಿಸಿದ್ದರು. ದರ್ಶನ್ ಒಪ್ಪಿಕೊಂಡಿದ್ದರು. ನಡುವೆ ಸಂಭವಿಸಿದ ಅಪಘಾತದಿಂದಾಗಿ ದರ್ಶನ್ ಬರುತ್ತಾರೋ ಇಲ್ಲವೋ ಎಂಬ ಕುತೂಹಲ ಸೃಷ್ಟಿಸಿತ್ತು.
ಗಾಯದ ನಡುವೆಯೂ ಕಾರ್ಯಕ್ರಮಕ್ಕೆ ಬಂದ ದರ್ಶನ್, ಮತ್ತೊಮ್ಮೆ ತಾನು ಸ್ನೇಹಜೀವಿ ಎಂದು ತೋರಿಸಿಕೊಟ್ಟರು. ಗಜ ವಿತ್ ಸೃಜ ಆದರು.