ಪುಟ್ಟಗೌರಿ ಮದುವೆ ಸೀರಿಯಲ್‍ನಲ್ಲಿ ಅಜ್ಜಿ ನಿಧನರಾದ ಬೆನ್ನಲ್ಲೇ, ಸೀರಿಯಲ್‍ನ ನಾಯಕಿ ಪುಟ್ಟಗೌರಿ ಮನೆ ಬಿಟ್ಟು ಹೊರಟಿದ್ದಾಳೆ. ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್, ಪುಟ್ಟಗೌರಿ ಸೀರಿಯಲ್‍ನಿಂದ ಹೊರನಡೆಯುತ್ತಿದ್ದಾರೆ.
ಹೆಚ್ಚು ಕಡಿಮೆ 5 ವರ್ಷ ಕಳೆದಿರುವ ಧಾರಾವಾಹಿಯಲ್ಲಿ ಸುಮಾರು ಮೂರೂವರೆ ವರ್ಷದಿಂದ ರಂಜನಿ ಪುಟ್ಟಗೌರಿಯಾಗಿದ್ದರು. ಅವರು ಹೊರನಡೆಯೋಕೆ ಕಾರಣ, ಮಂಗಳಗೌರಿ. ಧಾರಾವಾಹಿಯಲ್ಲಿ ಮಂಗಳ ಗೌರಿ ಅನ್ನೋ ಹೊಸ ಪಾತ್ರ ಎಂಟ್ರಿಯಾಗುತ್ತಿದ್ದು, ಇದರಿಂದ ಬೇಸತ್ತು ರಂಜನಿ ಹೊರನಡೆಯಲು ತೀರ್ಮಾನಿಸಿದ್ದಾರಂತೆ. ಪುಟ್ಟಗೌರಿಯಷ್ಟೇ ಪ್ರಾಮುಖ್ಯತೆ ಪಡೆದಿರುವ ಮಂಗಳ ಗೌರಿ ಪಾತ್ರ ಬಂದಾಗ, ನನಗೆ ಇದ್ಯಾಕೋ ಸರಿಯಿಲ್ಲ ಎನಿಸಿದ್ದು ಸತ್ಯ ಅಂತಾರೆ ಪುಟ್ಟಗೌರಿ/ರಂಜನಿ ರಾಘವನ್.
ಮುಂದಿನ ವಾರದಿಂದ ಪುಟ್ಟಗೌರಿ ಮದ್ವೆಯಲ್ಲಿ ಮಂಗಳ ಗೌರಿ ಎಂಟ್ರಿಯಾಗುತ್ತಿದ್ದು, ಇನ್ನು ಮುಂದೆ ರಂಜನಿ ನೋಡೋಕೆ ಸಿಗಲ್ಲ. ಇನ್ನು ಮುಂದೆ ಸಿನಿಮಾಗಳಲ್ಲಿ ಗಮನ ಕೇಂದ್ರೀಕರಿಸುತ್ತೆನೆ ಅಂತಾರೆ ರಂಜನಿ.
ಸೀರಿಯಲ್ ನಿರ್ದೇಶಕರು ಮತ್ತು ತಂಡದ ಪ್ರಕಾರ, ಇದು ತಾತ್ಕಾಲಿಕವಷ್ಟೆ. ಪುಟ್ಟಗೌರಿ ಡಿಸೆಂಬರ್‍ನಿಂದ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ತಾರೆ ಎನ್ನುತ್ತಿದ್ದಾರೆ.
Related Articles :-