` ಕೆಜಿಎಫ್ ರಿಲೀಸ್ ಮುಂದೂಡ್ತಾರಂತೆ.. ಹೌದಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will kgf release date being postponed
KGF

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಾಣದ ಉಗ್ರಂ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಇದು. 2 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಈ ಬಹುನಿರೀಕ್ಷಿತ ಚಿತ್ರದ ರಿಲೀಸ್ ಮುಂದಕ್ಕೆ ಹೋಯ್ತಾ..? ಇದು ಸದ್ಯಕ್ಕೆ ಗಾಂಧಿನಗರದ ಸೆನ್ಸೇಷನಲ್ ಸುದ್ದಿ. 

ಅಕ್ಟೋಬರ್ 14ಕ್ಕೆ ಕೆಜಿಎಫ್ ಟೀಸರ್ ಬಿಡುಗಡೆ ಹಾಗೂ ನವೆಂಬರ್ 16ಕ್ಕೆ ರಿಲೀಸ್ ಎಂದು ಹೇಳಿದ್ದ ಚಿತ್ರತಂಡ, ತಾಂತ್ರಿಕ ಕಾರಣಗಳಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕಿದೆಯಂತೆ. ಇದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಇದರ ಪ್ರಕಾರ, ಕೆಜಿಎಫ್ ಬಿಡುಗಡೆ ಡಿಸೆಂಬರ್ 3ನೇ ವಾರದಲ್ಲಿ ಆಗಲಿದೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery