` ಸುದೀಪ್ ಮದಕರಿಗೆ ವಾಲ್ಮೀಕಿ ಸ್ವಾಮೀಜಿ ಬೆಂಬಲ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
sudeep's madakari gets valmiki swamy support
Sudeep, Valmiki Swamiji

ಚಿತ್ರದುರ್ಗದ ವೀರ ಮದಕರಿ ನಾಯಕ ಸಿನಿಮಾವನ್ನು ಯಾರು ಮಾಡಬೇಕು..? ದರ್ಶನ್ ಮಾಡಬೇಕಾ..? ಸುದೀಪ್ ಮಾಡಬೇಕಾ..? ಈ ಬಗ್ಗೆ ಎರಡೂ ಕಡೆ ಸ್ಪಷ್ಟ ನಿರ್ಧಾರಗಳು ಹೊರಬಿದ್ದಿದ್ದರೂ, ಚರ್ಚೆಗಳು ಮುಂದುವರಿದಿವೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಅವರೇ ಮದಕರಿ ನಾಯಕ ಪಾತ್ರ ಮಾಡಬೇಕು ಎಂದಿದ್ದಾರೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಪ್ರಸನ್ನಾನಂದ  ಸ್ವಾಮೀಜಿ.

ಮದಕರಿ ನಾಯಕನ ಪಾತ್ರ ಮಾಡುವವರು ಅತ್ಯುತ್ತಮ ಕಲಾವಿದರಾಗಿರಬೇಕು. ಅವರ ಮುಖದಲ್ಲೊಂದು ಗಾಂಭೀರ್ಯ ಇರಬೇಕು. ಕಲಾವಂತಿಕೆ ಇರಬೇಕು. ಅದೆಲ್ಲವೂ ಸುದೀಪ್ ಅವರಲ್ಲಿದೆ. ಹೀಗಾಗಿ ಐದಾರು ವರ್ಷದ ಹಿಂದೆಯೇ ಸುದೀಪ್ ಅವರಿಗೆ ಮದಕರಿ ನಾಯಕನ ಪಾತ್ರ ಮಾಡುವಂತೆ ಹೇಳಿದ್ದೆ. ಅವರು ಸುಮಾರು ಒಂದೂವರೆ ವರ್ಷದಿಂದ ಈ ಕುರಿತು ಕೆಲಸ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ ಪ್ರಸನ್ನಾನಂದ ಸ್ವಾಮೀಜಿ.

ಜೊತೆಗೆ ಸುದೀಪ್ ನಮ್ಮ ಸಮುದಾಯದವರು ಎಂಬ ಪ್ರೀತಿಯೂ ಇದೆ. ಹೀಗಾಗಿ ಅವರೇ ಈ ಸಿನಿಮಾ ಮಾಡಬೇಕು ಅನ್ನೋದು ನಮ್ಮ ಆಸೆ. ಇದನ್ನು ಮೀರಿ ದರ್ಶನ್ ಮದಕರಿ ನಾಯಕನ ಸಿನಿಮಾ ಮಾಡುತ್ತೇನೆನೆಂದು ಹೊರಟರೆ, ಮುಂದೇನು ಮಾಡಬೇಕೆಂದು ಸಮುದಾಯದ ಮುಖಂಡರ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರೆ ಸ್ವಾಮೀಜಿ.

Sagutha Doora Doora Movie Gallery

Popcorn Monkey Tiger Movie Gallery