` ನಾನೂ ಮದಕರಿ ಸಿನಿಮಾ ಮಾಡುತ್ತೇನೆ - ಸುದೀಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
i will also make a film on makadakar nayaka says sudeep
Sudeep

ಕನ್ನಡದಲ್ಲಿ ಚಿತ್ರದುರ್ಗದ ಮದಕರಿ ನಾಯಕನ ಕುರಿತು ಎರಡು ಸಿನಿಮಾ ಬರುವುದು ಈಗ ಖಚಿತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಹಾಕಿಕೊಂಡು, ರಾಕ್‍ಲೈನ್ ವೆಂಕಟೇಶ್ ಗಂಡುಗಲಿ ಮದಕರಿ ನಾಯಕ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದ ಬೆನ್ನಲ್ಲೇ ಸುದೀಪ್ ಅವರೇ ಮದಕರಿ ನಾಯಕ ಸಿನಿಮಾ ಮಾಡಬೇಕು ಎಂದು ಅಭಿಮಾನಿಗಳು ದುಂಬಾಲು ಬಿದ್ದಿದ್ದರು. ಈ ಕುರಿತು ಸುದೀಪ್ ಸುದೀರ್ಘ ಪತ್ರವನ್ನೇ ಬರೆದಿದ್ದಾರೆ. ತಾವು ಮದಕರಿ ನಾಯಕನ ಸಿನಿಮಾ ಮಾಡುತ್ತಿರುವುದು ನಿಜ ಎಂದಿದ್ದಾರೆ.

ಮದಕರಿ ನಾಯಕನ ಕುರಿತು ರಿಸರ್ಚ್ ಕೆಲಸಕ್ಕೆ ಈಗಾಗಲೇ ಹಣವನ್ನೂ ಖರ್ಚು ಮಾಡಿರುವ ಸುದೀಪ್, ಒಂದು ತಂಡವನ್ನೇ ಆ ಕೆಲಸಕ್ಕೆ ಹಚ್ಚಿದ್ದಾರೆ. ಆ ತಂಡ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದೆ. ಸ್ಕ್ರಿಪ್ಟ್ ಕೆಲಸವೂ ನಡೆಯುತ್ತಿದೆ. ಮದಕರಿ ನಾಯಕನ ಕುರಿತು ಸಿನಿಮಾ ಮಾಡುವುದು ನನ್ನ ಕನಸು ಎಂದಿರುವ ಸುದೀಪ್, ರಾಕ್‍ಲೈನ್ ವೆಂಕಟೇಶ್ ಅವರ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೂ ಶುಭ ಹಾರೈಸಿದ್ದಾರೆ.

ನನ್ನ ತಂಡದ ಕನಸನ್ನು ಭಗ್ನ ಮಾಡಲು ನಾನು ಬಯಸುವುದಿಲ್ಲ. ಅದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ ಎಂದಿದ್ದಾರೆ ಸುದೀಪ್.

ಅಲ್ಲಿಗೆ ಕನ್ನಡದಲ್ಲಿ ಒಬ್ಬ ಐತಿಹಾಸಿಕ ವ್ಯಕ್ತಿಯ ಕುರಿತಂತೆ ಎರಡು ಸಿನಿಮಾ ಬರಲಿದೆ ಎನ್ನುವುದು ಖಚಿತವಾಗಿದೆ. ಯಾರು ಮೊದಲು ಮದಕರಿ ನಾಯಕನಾಗುತ್ತಾರೆ ಎನ್ನುವುದಷ್ಟೇ ಸದ್ಯದ ಕುತೂಹಲ.

Related Articles :-

ಒಬ್ಬ ವ್ಯಕ್ತಿ.. ಎರಡು ಸಿನಿಮಾ.. ಇದೇ ಮೊದಲಲ್ಲ..!

My Opinion on the Biopic on Veera Madhakari - Sudeep

Shivarjun Movie Gallery

KFCC 75Years Celebrations and Logo Launch Gallery