` ಹದ್ದು ಮೀರುವ ಹದಿಹರೆಯ.. ಪ್ರಣಯ.. ಕಾದಿದೆ ಅಪಾಯ..  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
naduve antharavirali has a message for youth
Naduve Antharavirali

ನಡುವೆ ಅಂತರವಿರಲಿ. ಈಗ ಚಿತ್ರಮಂದಿರಗಳಲ್ಲಿದೆ. ಐಶಾನಿ ಶೆಟ್ಟಿ ಮತ್ತು ಪ್ರಖ್ಯಾತ್ ಹದಿಹರೆಯದ ಪ್ರೇಮಿಗಳಾಗಿ ನಟಿಸಿರುವ ಸಿನಿಮಾ. ಪ್ರಣಯದ ಪಕ್ಷಿಗಳಂತೆ ಹಾರಾಡುವ ತುಂಟ ಪ್ರೇಮಿಗಳು, ಹದಿಹರೆಯದಲ್ಲಿ ಮಾಡುವ ಹುಡುಗಾಟ, ಪ್ರಣಯ.. ಅಲ್ಲಿಂದ ಶುರುವಾಗುವ ಅಪಾಯ.. ಎದುರಿಸುವ ಸಮಸ್ಯೆಗಳು.. ಆಗುವ ಅನಾಹುತಗಳೇ ಚಿತ್ರದ ಕಥಾವಸ್ತು.

ಮಣಿಕಾಂತ್ ಕದ್ರಿ ಸಂಗೀತದಲ್ಲಿ ಹಾಡುಗಳು ಹಿಟ್ ಆಗಿರುವುದು ಚಿತ್ರಕ್ಕೆ ಸಿಕ್ಕಿರುವ ಪ್ಲಸ್ ಪಾಯಿಂಟ್. ರವೀನ್ ಗೌಡ ನಿರ್ದೇಶನದ ಚಿತ್ರಕ್ಕೆ ರವೀನ್ ಜೊತೆ ಜಿ.ಕೆ.ನಾಗರಾಜ್ ಕೂಡಾ ನಿರ್ಮಾಪಕರು. 

ಇದೊಂದು ರಿಯಲ್ ಸ್ಟೋರಿ. 12ರಿಂದ 50ರ ವಯಸ್ಸಿನ ತನಕ ಎಲ್ಲರಿಗೂ ಈ ಸಿನಿಮಾ ರೀಚ್ ಆಗುತ್ತೆ. ಕನೆಕ್ಟ್ ಆಗುತ್ತೆ. ಇಷ್ಟವಾಗುತ್ತೆ ಅನ್ನೋದು ನಿರ್ದೇಶಕ ರವೀನ್ ಆತ್ಮವಿಶ್ವಾಸ. ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

Shivarjun Movie Gallery

KFCC 75Years Celebrations and Logo Launch Gallery