` ಆನ್‍ಲೈನ್‍ನಲ್ಲಿ ಅಂಬಿ ಲೀಕ್ - ಪೈರಸಿ ಪರಾಕ್ರಮಿಗೆ ಕಿಚ್ಚನ ಎಚ್ಚರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep fights against piracy makers
Sudeep

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿವಿಧ ಭಾಷೆಯ ಚಿತ್ರರಂಗದ ಸೆಲಬ್ರಿಟಿಗಳೂ ಸಿನಿಮಾ ನೋಡಿ ಥ್ರಿಲ್ಲಾಗುತ್ತಿದ್ದಾರೆ. ಎಂದಿನಂತೆ ಈ ಚಿತ್ರಕ್ಕೂ ಪೈರಸಿ ದುರುಳರ ಕಾಟ ತಟ್ಟಿದೆ. ಇಡೀ ಚಿತ್ರವನ್ನು ಆನ್‍ಲೈನ್‍ನಲ್ಲಿ ಬಿಡುಗಡೆ ಮಾಡಿ ವಿಕೃತ ಸಂತೋಷ ಅನುಭವಿಸಿದ್ದಾನೆ ಒಬ್ಬ ಕಿರಾತಕ. ಆ ಕಿರಾತಕನಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ವಾರ್ನಿಂ ಕೊಟ್ಟಿದ್ದಾರೆ.

ಮೈ ಫ್ರೆಂಡ್, ನೀನು ಎಲ್ಲೇ ಇರು. ನಿನ್ನ ಮೂಲ ಪತ್ತೆ ಹಚ್ಚುತ್ತೇನೆ. ಇದು ಕೋಪ ಅಲ್ಲ, ಸರಿ ತಪ್ಪಿನ ವಿಚಾರ ಅಷ್ಟೆ. ಶೀಘ್ರದಲ್ಲೇ ನಿನ್ನನ್ನು ಕಾಣುತ್ತೇನೆ.

ಇದು ಸುದೀಪ್ ಪೈರಸಿ ಪರಾಕ್ರಮಿಗೆ ನೀಡಿರುವ ಎಚ್ಚರಿಕೆ. ಸಾತ್ವಿಕರ ಸಿಟ್ಟೂ ಅಪಾಯಕಾರಿ. 

I Love You Movie Gallery

Rightbanner02_butterfly_inside

Paddehuli Movie Gallery