ರಾಕಿಂಗ್ ಸ್ಟಾರ್ ಯಶ್, ವಿಜಯ್ ಕಿರಗಂದೂರು ಅವರ ಹೊಂಬಾಳೆ ಪ್ರೊಡಕ್ಷನ್, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಕಾಂಬಿನೇಷನ್‍ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್. ನವೆಂಬರ್ 16ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಹಿಂದಿ ಕೆಜಿಎಫ್ ವಿತರಣೆಯ ಹಕ್ಕನ್ನು ಅನಿಲ್ ತಡಾನಿ ಖರೀದಿಸಿದ್ದಾರೆ.
ಅನಿಲ್ ತಡಾನಿ, ಕನ್ನಡದಲ್ಲಿ ಮಸ್ತ್ ಮಸ್ತ್ ಹುಡುಗಿಯಾಗಿ ನಟಿಸಿದ್ದ ಉಪೇಂದ್ರ ಚಿತ್ರದಿಂದ ಚಿರಪರಿಚಿತೆಯಾಗಿರುವ ರವೀನಾ ಟಂಡನ್‍ರ ಪತಿ. ಬಾಲಿವುಡ್‍ನಲ್ಲಿ ಸ್ಟಾರ್ ವಿತರಕ. ವಿಜಯ್ ದೇವರಕೊಂಡ ಹಾಗೂ ಕಾರ್ತಿಕ್ ಗೌಡ, ಅನಿಲ್ ತಡಾನಿ ಜೊತೆ ಮಾತುಕತೆ ನಡೆಸಿದ್ದಾರೆ. ಅನಿಲ್ ತಡಾನಿ ವಿತರಣೆ ಮಾಡುತ್ತಿರುವುದರಿಂದ ಹಿಂದಿಯಲ್ಲಿ ಬಹುದೊಡ್ಡ ಓಪನಿಂಗ್ ಸಿಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.