ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ನಡುವಿನ ಲವ್ ಬ್ರೇಕಪ್ ಆಗಿದೆ ಎನ್ನುವ ಸುದ್ದಿಗೆ ಗೀತ ಗೋವಿಂದಂ ಚಿತ್ರದ ಹೀರೋ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರ ನಡುವಿನ ಮುನಿಸಿಗೆ ಗೀತಗೋವಿಂದಂ ಸಿನಿಮಾದ ಲಿಪ್‍ಲಾಕ್ ದೃಶ್ಯವೂ ಕಾರಣ ಎನ್ನಲಾಗಿತ್ತು. ಈ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ ವಿಜಯ್ ದೇವರಕೊಂಡ.
`ಅವರ ಪರ್ಸನಲ್ ಲೈಫ್ ಬಗ್ಗೆ ಮಾತನಾಡೋಕೆ ನಾನು 3ನೇ ವ್ಯಕ್ತಿ. ನನಗೆ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರೂ ಗೊತ್ತು. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಕೇಳಿ ನನಗೂ ಬೇಜಾರಾಯ್ತು. ಈ ವಿಚಾರದ ಬಗ್ಗೆ ಅವರಿಬ್ಬರೇ ಮಾತನಾಡಬೇಕು' ಎಂದಿದ್ದಾರೆ ವಿಜಯ್ ದೇವರಕೊಂಡ.