ದಿ ವಿಲನ್. ಚಿತ್ರದ 4 ಟೀಸರ್‍ಗಳನ್ನು ಬಿಟ್ಟಿರೋ ನಿರ್ದೇಶಕ ಪ್ರೇಮ್, ಅಭಿಮಾನಿಗಳನ್ನು ಕುತೂಹಲ, ಕಾತುರದ ತುತ್ತತುದಿಗೆ ಕೊಂಡೊಯ್ದಿದ್ದಾರೆ. ಪ್ರೇಮ್ ಇಷ್ಟವಾಗೋದು ಈ ಕಾರಣಕ್ಕೆ. ಒಂದು ಸಿನಿಮಾವನ್ನು ಎಷ್ಟು ಅದ್ಭುತವಾಗಿ ಹೇಗೆ ಪ್ರಮೋಟ್ ಮಾಡಬೇಕು ಅನ್ನೋದು ಪ್ರೇಮ್‍ಗೆ ಚೆನ್ನಾಗಿ ಗೊತ್ತು. ದಿ ವಿಲನ್ ಚಿತ್ರದಲ್ಲಂತೂ, ಚಿತ್ರ ಪ್ರಚಾರದ ಸಾಧ್ಯತೆಗಳನ್ನೆಲ್ಲ ತೆರೆದಿಟ್ಟ ಪ್ರೇಮ್, ಇಡೀ ಚಿತ್ರರಂಗವೇ ಕಣ್ಣಲ್ಲಿ ಕಣ್ಣಿಟ್ಟು ಕಾಯುವಂತೆ ಮಾಡಿದ್ದಾರೆ.
4 ಟೀಸರ್ ಬಿಟ್ಟರೂ, ಚಿತ್ರದ ಕಥೆ ಏನಿರಬಹುದು ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ ಪ್ರೇಮ್. ಇದೇ ವೇಳೆ ಚಿತ್ರದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಡೇಟ್‍ನ್ನು ಅನೌನ್ಸ್ ಮಾಡಿದ್ದಾರೆ. ಅಕ್ಟೋಬರ್ 11ರಿಂದ ಅಂದರೆ ಸಿನಿಮಾ ಬಿಡುಗಡೆಯಾಗುವುದಕ್ಕೆ ಒಂದು ವಾರ ಮೊದಲಿನಿಂದಲೇ ನೀವು ಆನ್‍ಲೈನ್‍ನಲ್ಲಿ ದಿ ವಿಲನ್‍ಗೆ ಟಿಕೆಟ್ ಬುಕ್ ಮಾಡಬಹುದು. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್ ಆಗಲಿದೆ. 1000+ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಸಿದ್ಧರಾಗಿದ್ದಾರೆ ನಿರ್ಮಾಪಕ ಸಿ.ಆರ್.ಮನೋಹರ್.