Print 
upendra, rachita ram i love you, r chadru,

User Rating: 5 / 5

Star activeStar activeStar activeStar activeStar active
 
rachita ram looks glamorous
Rachita Ram

ಅಯೋಗ್ಯ ಚಿತ್ರದಲ್ಲಿ ಅಪ್ಪಟ ಮಂಡ್ಯ ಹುಡುಗಿಯಾಗಿ ಕಂಗೊಳಿಸಿದ್ದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್, ಆರ್.ಚಂದ್ರು ನಿರ್ದೇಶನದ ಐ ಲವ್ ಯೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನನ್ನೇ ಪ್ರೀತಿಸು ಎಂಬ ಹಾಡಿನಲ್ಲಿ ರಚಿತಾ ರಾಮ್ ಅವರ ಹಾಟ್ ಲುಕ್ ಅಬ್ಬಾ ಎನ್ನುವಂತಿದೆ. 

ರಚಿತಾ ರಾಮ್ ಅವರ ಸೌಂದರ್ಯ ಹಾಗೂ ಅವರ ಗುಳಿಕೆನ್ನೆಯ ಮೇಲೆ ಹಾಡು ಬರೆಯಲಾಗಿದೆಯಂತೆ. ಡಿಂಪಲ್ ಕ್ವೀನ್ ಡಿಂಪಲ್ ಮೇಲೆ ಬರೆದಿರುವ ಹಾಡಿನಲ್ಲೇ ಬುಲ್‍ಬುಲ್ ಇಷ್ಟು ಹಾಟ್ ಆಗಿ ನಟಿಸಿರೋದು.

ಆ ಕಾಸ್ಟ್ಯೂಮ್‍ನಲ್ಲಿ ರಚಿತಾ ರಾಮ್ ಗ್ಲಾಮರಸ್ ಆಗಿ ಕಾಣುತ್ತಾರೆ. ಅವರೊಬ್ಬ ಪಕ್ಕಾ ಪ್ರೊಫೆಷನಲ್. ರಚಿತಾ ಅವರ ಕಂಫರ್ಟ್‍ನೆಸ್‍ಗಾಗಿ ಸೆಟ್‍ನಲ್ಲಿ ನಿರ್ದೇಶಕರು, ಕ್ಯಾಮೆರಾಮನ್ ಮಾತ್ರ ಇದ್ದೆವು ಎಂದಿದ್ದಾರೆ ಚಂದ್ರು. ಉಪೇಂದ್ರ ನಾಯಕರಾಗಿರುವ ಐ ಲವ್ ಯೂ ಚಿತ್ರ, ಶುರುವಾದಾಗಿನಿಂದಲೂ ದಿನೇ ದಿನೇ ನಿರೀಕ್ಷೆ ಹೆಚ್ಚಿಸುತ್ತಿದೆ.