` ರಶ್ಮಿಕಾ ಜಾಗಕ್ಕೆ ಮಣಿರತ್ನಂ ಚಿತ್ರದ ನಿತ್ಯಶ್ರೀ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nithya sri replaces rashmika in vritha
Nitya Sri Replaces Rashmika

ವೃತ್ರ' ಎಂಬ ಹೆಸರಿನ ಈ ಚಿತ್ರ ಇಷ್ಟೊತ್ತಿಗೆ ಸೆಟ್ಟೇರಿ ಚಿತ್ರೀಕರಣ ಶುರುವಾಗಬೇಕಿತ್ತು. ಮೊದಲು ಖುಷಿಯಿಂದ ಚಿತ್ರ ಒಪ್ಪಿಕೊಂಡಿದ್ದ ರಶ್ಮಿಕಾ ಮಂದಣ್ಣ, ನಂತರ ವೃತ್ತಿ ಜೀವನದ ಆರಂಭದಲ್ಲೇ ಇಂತಹ ಪಾತ್ರ ಬೇಡ ಎಂದು ಎದ್ದುಹೋಗಿದ್ದರು. ಈಗ ಅ ಜಾಗಕ್ಕೆ ನಿತ್ಯಶ್ರೀ ಎಂಬ ಹುಡುಗಿ ನಾಯಕಿಯಾಗಿದ್ದಾರೆ.

ನಿತ್ಯಶ್ರೀ, ಕಾಟ್ರು ವೆಲಿಯಿಡೈ ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿದ್ದರು. ಅದು ಭಾರತದ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಸಿನಿಮಾ. ಭರತನಾಟ್ಯ ಪ್ರವೀಣೆಯಾಗಿರುವ ನಿತ್ಯಶ್ರೀಗೆ `ನೀನು ಚೆನ್ನಾಗಿ ಅಭಿನಯಿಸಬಲ್ಲೆ' ಎಂದು ಹೇಳಿ ಸಿನಿಮಾ ಮಾಡಿಸಿದ್ದರು ಮಣಿರತ್ನಂ. ಅದಾದ ಮೇಲೆ ದುಲ್ಕರ್ ಸಲ್ಮಾನ್‍ರ `ಸೋಲೋ' ಎಂಬ ಮಲಯಾಳಂ ಚಿತ್ರಕ್ಕೆ ಸಹ ನಿರ್ದೇಶಕಿಯಾಗಿದ್ದರು. ನೃತ್ಯದಲ್ಲಿ ಮಯೂರಿ ಉಪಾಧ್ಯ ಅವರ ಶಿಷ್ಯೆ. ಈಗ ವೃತ್ರ ಚಿತ್ರಕ್ಕೆ ನಾಯಕಿ. ಮೂಲತಃ ಕನ್ನಡತಿ.

ಪೊಲೀಸ್ ಅಧಿಕಾರಿಯಾಗಿ ಕೆಲಸ ಆರಂಭಿಸುವ ಹುಡುಗಿಯೊಬ್ಬಳು ಎದುರಿಸುವ ಮೊದಲ ಕೇಸ್‍ನ ಕಥೆ ವೃತ್ರ ಚಿತ್ರದಲ್ಲಿದೆ. ನಿರ್ಮಾಪಕ ಗೌತಮ್ ಅಯ್ಯರ್. `ಸ್ಕ್ರಿಪ್ಟ್ ಚೆನ್ನಾಗಿದೆ. ಚಿತ್ರೀಕರಣದಲ್ಲಿ ಭಾಗವಹಿಸೋಕೆ ಕಾಯುತ್ತಿದ್ದೇನೆ' ಎಂದಿದ್ದಾರೆ ನಿತ್ಯಶ್ರೀ.