ಗಣೇಶ್ ಅಭಿನಯದ ಆರೆಂಜ್ ಸಿನಿಮಾ ಶೂಟಿಂಗ್ ಮುಗಿಯುತ್ತಿರುವಂತೆಯೇ ಚಿತ್ರದ ವಿಲನ್ ಯಾರು ಅನ್ನೋ ಸೀಕ್ರೆಟ್ ಕೂಡಾ ಬಯಲಾಗಿದೆ. ಮಗಧೀರ ಚಿತ್ರದ ಖಳ ದೇವ್ಗಿಲ್, ಇಲ್ಲಿ ಗಣೇಶ್ಗೆ ವಿಲನ್ ಆಗಿದ್ದಾರೆ. ಝೂಮ್ ಚಿತ್ರದಲ್ಲೂ ನಟಿಸಿದ್ದ ದೇವ್ಗಿಲ್ಗೆ ಇದು ಗಣೇಶ್ ಎದುರು 2ನೇ ಸಿನಿಮಾ.
ರಾಜಕುಮಾರ ಖ್ಯಾತಿಯ ಪ್ರಿಯಾ ಆನಂದ್, ಗಣೇಶ್ಗೆ ನಾಯಕಿ. ಇದು ಲವ್ ಕಂ ಆ್ಯಕ್ಷನ್ ಸಿನಿಮಾ. ಗಣೇಶ್ ಅವರದ್ದು ಇಲ್ಲಿ ರಾಬಿನ್ ಹುಡ್ ಶೈಲಿಯ ಪಾತ್ರವಂತೆ. ಪ್ರಶಾಂತ್ ರಾಜ್, ಈ ಚಿತ್ರದ ಮೂಲಕ ಗಣೇಶ್ ಇಮೇಜ್ನ್ನೇ ಬದಲಿಸಲಿದ್ದಾರಾ..?--