ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸಂಭವಿಸಿದ ಅಪಘಾತ ಅವರ ಚಿತ್ರಗಳಿಗೆ ಬ್ರೇಕ್ ಹಾಕಿದೆ. ಮಿಂಚಿನ ವೇಗದಲ್ಲಿ ನಡೆಯುತ್ತಿದ್ದ ಚಿತ್ರೀಕರಣ, ಪ್ರೊಡಕ್ಷನ್ ಕೆಲಸಗಳು ಏರುಪೇರಾಗಿವೆ. ಅಪಘಾತವಾದ ಹಿಂದಿನ ದಿನವಷ್ಟೇ ಯಜಮಾನ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಬಹುತೇಕ ಚಿತ್ರೀಕರಣ ಮುಗಿಸಿದ್ದ ಸಿನಿಮಾದ ಹಾಡುಗಳ ಶೂಟಿಂಗ್ ಅಷ್ಟೇ ಬಾಕಿಯಿತ್ತು. ವಿದೇಶದಲ್ಲಿ ಶೂಟಿಂಗ್‍ಗೆ ಪ್ಲಾನ್ ಮಾಡಿದ್ದ ಚಿತ್ರತಂಡ, ಈಗ ಶೂಟಿಂಗ್‍ನ್ನು ಅನಿರ್ದಿಷ್ಟಾವಧಿಗೆ ಮುಂದೆ ಹಾಕಿದೆ. ಪಿ.ಕುಮಾರ್ ನಿರ್ದೇಶನದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ.
ದರ್ಶನ್ ಗುಣಮುಖರಾಗುವವರೆಗೆ ಶೂಟಿಂಗ್ ಮಾತೇ ಇಲ್ಲ. ರಿಲೀಸ್ ಡೇಟ್ ಕೂಡಾ ಮುಂದೆ ಹೋಗುತ್ತೆ. ಉಳಿದ ಕೆಲಸಗಳನ್ನು ಮುಗಿಸಿಕೊಳ್ಳುತ್ತೇವೆ. ಆದಷ್ಟು ಬೇಗ ಗುಣಮುಖರಾಗಿ ಶೂಟಿಂಗ್ ಶುರುವಾಗಲಿದೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.
ಸಂದೇಶ್ ನಾಗರಾಜ್ ನಿರ್ಮಾಣದ ಒಡೆಯ ಚಿತ್ರದ ಚಿತ್ರೀಕರಣವೂ ಸದ್ಯಕ್ಕೆ ಮುಂದಕ್ಕೆ ಹೋಗಿದೆ. 18 ದಿನಗಳ ಶೂಟಿಂಗ್ ಮುಗಿಸಿದ್ದ ಸಿನಿಮಾ ಟೀಂ, ದರ್ಶನ್ ಗುಣಮುಖರಾದ ಮೇಲಷ್ಟೇ ಮುಂದಿನ ಶೂಟಿಂಗ್ಎಂದಿದ್ದಾರೆ ಸಂದೇಶ್ ನಾಗರಾಜ್.