` ಕುಲದಲ್ಲಿ ಕೀಳ್ಯಾವುದೋ.. ಶಿವಣ್ಣ.. ಭಟ್ರು.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yogaraj bhat shivanna movie
Yogaraj Bhat, Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್‍ನಲ್ಲಿ ಸಿನಿಮಾ ಬರಲಿದೆ. ಪಂಚತಂತ್ರ ಮುಗಿಸಿದ ನಂತರ ಭಟ್ಟರು ಶಿವರಾಜ್‍ಕುಮಾರ್ ಸಿನಿಮಾ ನಿರ್ದೇಶಿಸಲಿದ್ದಾರೆ ಅನ್ನೋದು ಗುಟ್ಟೇನಲ್ಲ. ಈಗ ಆ ಚಿತ್ರಕ್ಕೆ ಟೈಟಲ್ ಫಿಕ್ಸಾಗಿದೆ ಅನ್ನೋ ಸುದ್ದಿ ತೇಲಿ ಬರುತ್ತಿದೆ.

ಸ್ಟಾರ್ ಹೀರೋ, ಸ್ಟಾರ್ ಡೈರೆಕ್ಟರ್ ಕಾಂಬಿನೇಷನ್ ಚಿತ್ರಕ್ಕೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ ಚಿತ್ರದ ಹಾಡಿನ ಸಾಲನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದಾರಂತೆ ಭಟ್ಟರು. ಕುಲದಲ್ಲಿ ಕೀಳ್ಯಾವುದೋ.. ಅನ್ನೋ ಸಾಲನ್ನೇ ಚಿತ್ರಕ್ಕೆ ಇಟ್ಟುಕೊಳ್ಳಲು ತೀರ್ಮಾನಿಸಿದ್ದಾರಂತೆ. 

ಸಿನಿಮಾದಲ್ಲಿ ರಾಷ್ಟ್ರೀಯ ಏಕತೆ, ಜಾತಿಮತಭೇದ ಬಿಟ್ಟು ಜನ ಒಂದಾಗಿ ಬಾಳಬೇಕು ಎನ್ನುವ ಸಂದೇಶವಿದೆಯಂತೆ. ಹೀಗಾಗಿಯೇ ಚಿತ್ರಕ್ಕೆ ಕುಲದಲ್ಲಿ ಕೀಳ್ಯಾವುದೋ ಟೈಟಲ್ ಇಡಲು ತೀರ್ಮಾನಿಸಲಾಗಿದೆಯಂತೆ. ಭಟ್ಟರು ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಕಥೆ ಹೇಳಲಿದ್ದಾರಂತೆ. ರಾಶಿ ಬ್ರದರ್ಸ್ ಲಾಂಚನದಲ್ಲಿ ಬರಲಿರೋ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿರುವ ಸಾಧ್ಯತೆ ಇದೆ.

Chemistry Of Kariyappa Movie Gallery

BellBottom Movie Gallery