` ಅಂಬಿ.. ಚಿತ್ರದಲ್ಲಿ ಶೃತಿಗಿರೋ ಬೇಸರ ಅದೊಂದೇ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sruthi hariharan still waiting to share screen with suhasini
Suhasini, Sruthi Hariharan

ಅಂಬಿ ನಿಂಗ್ ವಯಸ್ಸಾಯ್ತೋ.. ಇದು ರೆಬಲ್‍ಸ್ಟಾರ್ ಅಂಬರೀಷ್ ಸುಹಾಸಿನಿ ಜೋಡಿಯಾಗಿ ನಟಿಸಿರುವ ಸಿನಿಮಾ. ಯಂಗ್ ಅಂಬಿಯಾಗಿ ಸುದೀಪ್ ನಟಿಸಿದ್ದರೆ, ಯಂಗ್ ಸುಹಾಸಿನಿಯಾಗಿ ನಟಿಸಿರುವುದು ಶೃತಿ ಹರಿಹರನ್. 

ಸುಹಾಸಿನಿಯವರ ಯಂಗ್ ಪಾತ್ರಕ್ಕೆ ನಿರ್ದೇಶಕ, ನಿರ್ಮಾಪಕರ ಮನಸ್ಸಿನಲ್ಲಿ ಮೂಡಿದ ಮೊದಲ ಹೆಸರೇ ಶೃತಿ ಹರಿಹರನ್. ಆ ವಿಷಯಕ್ಕೆ ಶೃತಿಗೆ ಸಂತೋಷವಿದೆ. ಹೆಮ್ಮೆಯೂ ಇದೆ. ಸುದೀಪ್ ಜೊತೆ ನಟಿಸಿರುವ ಶೃತಿ, ಅದನ್ನು ಖುಷಿಯಿಂದಲೇ ಹೇಳಿಕೊಳ್ತಾರೆ. ಇದೆಲ್ಲದರ ಜೊತೆಗೆ ಅವರನ್ನು ಅದೊಂದು ಬೇಸರ ಕಾಡುತ್ತಲೇ ಇದೆ.

ನಾನು ಸುಹಾಸಿನಿ ಮೇಡಂ ಜೊತೆ 4 ಚಿತ್ರಗಳಲ್ಲಿ ಜೊತೆಯಾಗಿದ್ದೇನೆ. ಅಂಬಿ.. 4ನೇ ಸಿನಿಮಾ. ಆದರೆ, ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶವೇ ನನಗೆ ಸಿಕ್ಕಿಲ್ಲ ಎಂಬ ಬೇಸರ ಕಾಡುತ್ತಲೇ ಇದೆ ಎಂದು ಹೇಳಿಕೊಂಡಿದ್ದಾರೆ ಶೃತಿ ಹರಿಹರನ್. ಮುಂದಿನ ದಿನಗಳಲ್ಲಿ ಆ ಕನಸು ಕೂಡಾ ಈಡೇರಲಿದೆ ಎಂಬ ಆಸೆ ಅವರಲ್ಲಿದೆ.

ಸುದೀಪ್, ಜಾಕ್‍ಮಂಜು ನಿರ್ಮಾಣದ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದ್ದು, ಇದೇ ವಾರ ತೆರೆಗೆ ಬರುತ್ತಿದೆ. 

India Vs England Pressmeet Gallery

Odeya Audio Launch Gallery