` ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ನೆಲಸಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mysore theater studio demolished
Premiere Theater in Mysore, Owner Basavaraj

ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಚಿತ್ರೀಕರಣಕ್ಕೆ ಸಾಕ್ಷಿಯಾಗಿದ್ದ, ಕನ್ನಡ ಚಿತ್ರರಂಗದ ಇತಿಹಾಸದ ಕೊಂಡಿಯಲ್ಲಿ ಅವಿಭಾಜ್ಯ ಅಂಗವಾಗಿದ್ದ ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ನೆಲಸಮವಾಗುತ್ತಿದೆ. ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಇಟಾಲಿಯನ್ ಸಿನಿಮಾಗಳೂ ಕೂಡ ಇಲ್ಲಿ ಚಿತ್ರೀಕರಣಗೊಂಡಿದ್ದವು.

1954ರಲ್ಲಿ ಎಂ.ಎನ್. ಬಸವರಾಜಯ್ಯ ಅವರು ಸ್ಥಾಪಿಸಿದ್ದ ಸ್ಟುಡಿಯೋದಲ್ಲಿ ಭಾರತ ಚಿತ್ರರಂಗದ ಧೃವ ನಕ್ಷತ್ರಗಳೆಲ್ಲ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿವೆ. 1989ರಲ್ಲಿ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿ ಚಿತ್ರೀಕರಣದ ವೇಳೆ, ಸ್ಟುಡಿಯೋದಲ್ಲಿ ಅಗ್ನಿ ದುರಂತ ಸಂಭವಿಸಿತ್ತು. 61 ಜನ ಕಾರ್ಮಿಕರು ಸಜೀವ ದಹನವಾಗಿದ್ದರು. ಆ ದುರಂತದ ನಂತರ ಸ್ಟುಡಿಯೋ ಮತ್ತೆ ಮೇಲೇಳಲೇ ಇಲ್ಲ. ಆಮೇಲೆ ಹೋಟೆಲ್ ಆಗಿ ಪರಿವರ್ತನೆಯಾಗಿದ್ದ ಸ್ಟುಡಿಯೋ ಈಗ ನೆಲಸಮಗೊಂಡಿದೆ. ಕನ್ನಡ ಚಿತ್ರರಂಗದ ಇತಿಹಾಸವೊಂದು ಕಣ್ಮುಚ್ಚಿದೆ.

I Love You Movie Gallery

Rightbanner02_butterfly_inside

One Way Movie Gallery