ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗಿನಲ್ಲಿ ಇದುವರೆಗೆ ನಟಿಸಿರುವ ಒಟ್ಟು ಚಿತ್ರಗಳ ಸಂಖ್ಯೆ 5. ವಿಶೇಷ ಅಂದ್ರೆ ಐದಕ್ಕೆ ಐದೂ ಚಿತ್ರಗಳು ಹಿಟ್. ಈಗ ತೆಲುಗಿನಲ್ಲಿ ದೇವದಾಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ರಶ್ಮಿಕಾಗೆ ಈ ಚಿತ್ರದಲ್ಲಿ ತೆಲುಗು ಇಂಡಸ್ಟ್ರಿಯ ರೊಮ್ಯಾಂಟಿಕ್ ಸ್ಟಾರ್ ನಾಗಾರ್ಜುನ ಜೊತೆ ನಟಿಸುವ ಅದೃಷ್ಟ ಖುಲಾಯಿಸಿದೆ. ನಾಗಾರ್ಜುನ ಹಾಗೂ ನಾನಿ ಚಿತ್ರದ ಹೀರೋಗಳು. ಚಿತ್ರದ ಆಡಿಯೋ ರಿಲೀಸ್ ವೇದಿಕೆಯಲ್ಲಿ ಅಕ್ಕಿನೇನಿ ನಾಗಾರ್ಜುನ ರಶ್ಮಿಕಾ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ರಶ್ಮಿಕಾ ಈಗಾಗಲೇ ತೆಲುಗಿನಲ್ಲಿ 2 ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಈ ಸಿನಿಮಾ ಕೂಡಾ ಹಿಟ್ ಆಗಲಿದೆ. ಇದಾದ ನಂತರ ಹ್ಯಾಟ್ರಿಕ್ ಹಿಟ್ ಸಾಧಿಸಲಿರೋ ರಶ್ಮಿಕಾ, ಸೌತ್ ಇಂಡಸ್ಟ್ರಿಯ ಟಾಪ್ ನಟಿ ಎನಿಸಿಕೊಳ್ಳಲಿದ್ದಾರೆ ಎನ್ನುವುದು ನಾಗಾರ್ಜುನ ರಶ್ಮಿಕಾ ಬಗ್ಗೆ ಹೇಳಿರೋ ಭವಿಷ್ಯ.
ರಶ್ಮಿಕಾ ಸದಾ ನಗು ನಗುತ್ತಾ ಮಾತನಾಡುವ ಹುಡುಗಿ, ಎನರ್ಜೆಟಿಕ್ ಎನ್ನುವ ನಾಗಾರ್ಜುನ, ಆಕೆ ಜೊತೆಯಲ್ಲಿದ್ದರೆ, ಅಲ್ಲಿ ನಗು ಗ್ಯಾರಂಟಿ ಎಂಬ ಸರ್ಟಿಫಿಕೇಟ್ ಕೊಟ್ಟಿದ್ದಾರೆ.