ಪಂಚತಂತ್ರ. ಯೋಗರಾಜ್ ಭಟ್ಟರ ಸಿನಿಮಾ. ಸುದೀರ್ಘ ಕಾಲದ ನಂತರ ಹೊಸಬರ ಜೊತೆ ಮಾಡುತ್ತಿರುವ ಸಿನಿಮಾ. ಇತ್ತೀಚೆಗಷ್ಟೇ ಶೃಂಗಾರಕ್ಕೇ ಠೂ ಬಿಟ್ಟು ಮೈ ಚಳಿ ಹೆಚ್ಚಿಸಿದ್ದ ಭಟ್ಟರು, ಈಗ ಚಿತ್ರದ ಫಸ್ಟ್ಲುಕ್ ಹೊರತಂದಿದ್ದಾರೆ. ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿರುವುದು ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್.
ಫಸ್ಟ್ಲುಕ್ ರಿಲೀಸ್ ಮಾಡಿದ ಶಿವಣ್ಣ, ಹೊಸ ನಟ ವಿಹಾನ್, ಸೋನಲ್ ಮಂತೆರೋಗೆ ಶುಭ ಹಾರೈಸಿದ್ದಾರೆ. ಸಿನಿಮಾದಲ್ಲಿ ಪಂಚತಂತ್ರದ ಕಥೆಯ ಎಳೆ ಬಿಚ್ಚಿಟ್ಟ ಯೋಗರಾಜ್ ಭಟ್, ಇದು ಒಂದು ಜಾಗಕ್ಕಾಗಿ ಎರಡು ತಲೆಮಾರಿನವರ ನಡುವೆ ನಡೆಯುವ ಹೋರಾಟದ ಕಥೆ ಎಂದಿದ್ದಾರೆ.
ವಿಹಾನ್ ಚಿತ್ರದಲ್ಲಿ ಬೈಕ್ ರೇಸರ್. ಅವರಿಗೆ ಸೋನಲ್ ಮಂತೆರೋ ಸ್ಪೀಡ್ ಬ್ರೇಕರ್. ರಂಗಾಯಣ ರಘು, ಅಕ್ಷರಾ ಗೌಡ, ಕರಿಸುಬ್ಬು, ಮಾಸ್ತಿ ಮೊದಲಾದವರು ನಟಿಸಿರುವ ಸಿನಿಮಾಕ್ಕೆ, ಹರಿಪ್ರಸಾದ್ ಜಯಣ್ಣ ಹಾಗೂ ಹೇಮಂತ್ ಪರಾಡ್ಕರ್ ನಿರ್ಮಾಪಕರು. ನವೆಂಬರ್ನಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.