` ಉಪ್ಪಿಯ ಹೊಸ ಪಕ್ಷ UPP ಬಂದೇ ಬಿಡ್ತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra's political party launchd
Upendra

ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷ ಅಖಾಡಕ್ಕಿಳಿದಿದೆ. ಯುಪಿಪಿಐ (uppi) ಅನ್ನೋ ಹೆಸರಲ್ಲಿ ಐ ಅಕ್ಷರನ್ನು ಡಿಲೀಟ್ ಮಾಡುವ ಮೂಲಕ ಉಪ್ಪಿ, ತಮ್ಮ ಹೊಸ ಪಕ್ಷವನ್ನು ಆರಂಭಿಸಿದದಾರೆ. ಉತ್ತಮ ಪ್ರಜಾಕೀಯ ಪಕ್ಷ. ಉಪೇಂದ್ರ ಅವರ ಹೆಸರಿನ ಇಂಗ್ಲಿಷ್ ಸ್ಪೆಲ್ಲಿಂಗ್‍ನ ಆರಂಭದ ಮೂರು ಅಕ್ಷರಗಳೇ ಪಕ್ಷದ ಶಾರ್ಟ್ ಫಾರ್ಮ್.

ಪಕ್ಷದಲ್ಲಿನ I ಅನ್ನು ತೆಗೆದು ಸುಟ್ಟ ಉಪ್ಪಿ, ತಮ್ಮ ಎಂದಿನ ಸ್ಟೈಲ್‍ನಲ್ಲೇ (I)ಐ ಅಂದ್ರೆ ನಾನು. ಇನ್ನು ಮುಂದೆ ನಾನು ಎಂಬ ಪದ ಇರಬಾರದು. ಮುಂದಿನ ವರ್ಷದಿಂದ ಪ್ರಜಾಕೀಯ ಪಕ್ಷದ ಹುಟ್ಟುಹಬ್ಬವನ್ನಷ್ಟೇ ಆಚರಿಸಬೇಕು. ನನ್ನ ಹುಟ್ಟುಹಬ್ಬ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡ್ರು.

ಉಪ್ಪಿ ಪಕ್ಷದ ವೆಬ್‍ಸೈಟ್‍ನ್ನು ಕೂಡಾ ಇದೇ ವೇಳೆ ಆರಂಭಿಸಲಾಯ್ತು. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇದುವರೆಗೆ ಯಾವುದೆ ನಿರ್ಣಯ ಕೈಗೊಂಡಿಲ್ಲ. ಎಲ್ಲ ಸಿದ್ಧತೆಗಳೂ ಪೂರ್ಣಗೊಂಡರೆ, ಸ್ಪರ್ಧೆಯ ಕುರಿತು ಯೋಚಿಸುತ್ತೇವೆ ಎಂದಿದ್ದಾರೆ ಉಪೇಂದ್ರ.

The Terrorist Movie Gallery

Kumari 21 Movie Gallery