ಚಾಲೆಂಜಿಂಗ್ ಸ್ಟಾರ್ ದರ್ಶನ್, ವನ್ಯಜೀವಿ ಮೃಗಾಲಯಕ್ಕೆ ರಾಯಭಾರಿ. ಪ್ರಾಣಿ, ಪಕ್ಷಿಗಳ ಪ್ರೇಮಿ. ಮೃಗಾಲಯದಲ್ಲಿ ಹುಲಿ ಹಾಗೂ ಕೆಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿರುವುದು ಗೊತ್ತಿರುವ ವಿಚಾರ. ಈಗ.. ದರ್ಶನ್ ಅವರ ಗೆಳೆಯ ಸೃಜನ್ ಲೋಕೇಶ್ ಕೂಡಾ ಅದೇ ಹಾದಿ ತುಳಿದಿದ್ದಾರೆ.
ದರ್ಶನ್ ಅವರಂತೆಯೇ ಸೃಜನ್ ಕೂಡಾ ಒಂದು ಬಿಳಿಹುಲಿಯನ್ನು ದತ್ತು ಪಡೆದಿದ್ದಾರೆ. ಗೆಳೆಯನನ್ನು ದರ್ಶನ್ ಅಭಿನಂದಿಸಿದ್ದು, ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದಿದ್ದಾರೆ.