` ಸಂಕ್ರಾಂತಿಗೆ ಶುರುವಾಗಲಿದೆ ಗಂಡುಗಲಿ ಮದಕರಿ ನಾಯಕ  - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan;s madkari nayaka to launch on sankaranthi
Darshan

ಗಂಡುಗಲಿ ಮದಕರಿ ನಾಯಕನಾಗಿ ದರ್ಶನ್ ನಟಿಸಲು ಒಪ್ಪಿದ್ದು, ಕಥೆ, ಚಿತ್ರಕಥೆ ಸಿದ್ಧವಾಗುತ್ತಿದೆ. ಕಥೆಗಾರ ಬಿ.ಎಲ್. ವೇಣು, ತಮ್ಮದೇ ಗಂಡುಗಲಿ ಮದಕರಿ ನಾಯಕ ಕಾದಂಬರಿಯನ್ನು ಚಿತ್ರಕಥೆಯಾಗಿಸುತ್ತಿದ್ದಾರೆ. ನಿರ್ದೇಶಕರು ಯಾರು ಎಂಬ ಸಸ್ಪೆನ್ಸ್‍ಗೂ ಈಗ ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶನದ ಹೊಣೆ ಹೊತ್ತಿರುವುದು ಎಸ್.ವಿ. ರಾಜೇಂದ್ರ ಸಿಂಗ್ ಬಾಬು.

1983ರಲ್ಲಿ ಬಿ.ಎಲ್. ವೇಣು ಗಂಡುಗಲಿ ಮದಕರಿ ನಾಯಕ ಅನ್ನೋ ಕಾದಂಬರಿ ಬರೆದಿದ್ದರು. ತರಾಸು ಅವರ ದುರ್ಗಾಸ್ತಮಾನ ಬಿಟ್ಟರೆ, ಗಂಡುಗಲಿ ಮದಕರಿ ನಾಯಕ ಕಾದಂಬರಿಯೇ ಜನಪ್ರಿಯ. ಈ ಹಿಂದೆ ದುರ್ಗಾಸ್ತಮಾನ ಕೃತಿಯನ್ನು ಸಿನಿಮಾ ಮಾಡುವುದಾಗಿ ಹಲವರು ಆಸೆ ತೋಡಿಕೊಂಡಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ಈಗ ಅ ಕನಸನ್ನು ಈಡೇರಿಸಲು ಪಣ ತೊಟ್ಟು ಹೊರಟಿದ್ದಾರೆ ರಾಕ್‍ಲೈನ್ ವೆಂಕಟೇಶ್. ಜನವರಿ 15ಕ್ಕೆ ಮದಕರಿ ನಾಯಕ ಸಿನಿಮಾ ಲಾಂಚ್ ಆಗಲಿದೆ.

`ಗಂಡುಗಲಿ ಮದಕರಿ ನಾಯಕ ಸಿನಿಮಾ ನನ್ನ ಕನಸು. ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿ ಬರುತ್ತಿದೆ. ವೇಣು ತುಂಬಾ ಚೆನ್ನಾಗಿ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ನಾನು ಸುಮಾರು 2 ವರ್ಷಗಳ ಹಿಂದೆಯೇ ರಾಜೇಂದ್ರ ಸಿಂಗ್ ಬಾಬು ಅವರಿಗೆ ಈ ಪ್ರಾಜೆಕ್ಟ್ ಬಗ್ಗೆ ಹೇಳಿದ್ದೆ. ಅವರು ಇಂತಹ ಐತಿಹಾಸಿಕ ಸಿನಿಮಾಗೆ ಬೆಸ್ಟ್ ಆಯ್ಕೆ' ಇದು ರಾಕ್‍ಲೈನ್ ಮಾತು.

ಚಿತ್ರದುರ್ಗದ ಸರದಾರ ಮದಕರಿ ನಾಯಕನನ್ನೇ ಹೀರೋ ಆಗಿಸಿ ಇದುವರೆಗೆ ಸಿನಿಮಾ ಬಂದಿಲ್ಲ. ಕಲ್ಲರಳಿ ಹೂವಾಗಿ ಚಿತ್ರದಲ್ಲಿ ಚಿತ್ರದುರ್ಗದ ಕಥೆಯಿದ್ದರೂ, ಮದಕರಿ ನಾಯಕ ಪ್ರಮುಖ ಪಾತ್ರವಾಗಿರಲಿಲ್ಲ. ಆ ಸಿನಿಮಾದಲ್ಲಿ ಅಂಬರೀಷ್ ಮದಕರಿ ನಾಯಕನಾಗಿದ್ದರು. ಈಗ.. ದರ್ಶನ್ ಮದಕರಿಯಾಗುತ್ತಿದ್ದಾರೆ.

Related Articles :-

Darshan's New Film Titled Gandugali Madakari Nayaka

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery