Print 
jaggesh madhoo

User Rating: 0 / 5

Star inactiveStar inactiveStar inactiveStar inactiveStar inactive
 
jaggesh shares screen with madhoo
Madhubala, Jaggesh

ಮಧುಬಾಲಾ ಎಂದರೆ ಬಾಲಿವುಡ್‍ನವರಿಗೆ ರೋಜಾ ನೆನಪಾದರೆ, ಕನ್ನಡಿಗರ ಕಣ್ಮುಂದೆ ಬರೋದು ಅಣ್ಣಯ್ಯ. ರವಿಚಂದ್ರನ್ ಅವರ ಅಣ್ಣಯ್ಯ ಚಿತ್ರದಲ್ಲಿ ಮೋಡಿ ಮಾಡಿದ್ದ ಮಧುಬಾಲಾ, ಇತ್ತೀಚೆಗೆ ರನ್ನ ಚಿತ್ರದಲ್ಲಿ ಸುದೀಪ್‍ಗೆ ಅತ್ತೆಯಾಗಿ ಕಾಣಿಸಿಕೊಂಡಿದ್ದರು. ಈಗ.. ಮತ್ತೊಮ್ಮೆ ಜಗ್ಗೇಶ್‍ಗೆ ಜೋಡಿಯಾಗಿ ಬರುತ್ತಿದ್ದಾರೆ.

ಪ್ರೀಮಿಯರ್ ಪದ್ಮಿನಿ, ಜಗ್ಗೇಶ್ ಅಭಿನಯದ ಸಿನಿಮಾ. ಸಂಪ್ರದಾಯವಾದಿ ಜಗ್ಗೇಶ್ ಮತ್ತು ಮಾಡರ್ನ್ ಮಧುಬಾಲಾ ಅವರ ತಿಕ್ಕಾಟಗಳೇ ಚಿತ್ರದ ಕಥೆಯಂತೆ. ಬೆಂಗಳೂರು ಹೊರವಲಯದಲ್ಲಿ ಉತ್ತರಹಳ್ಳಿ ಸಮೀಪದ ರುದ್ರಾಕ್ಷಿ ಎಂಬಲ್ಲಿ ಚಿತ್ರೀಕರಣ ಶುರುವಾಗಿದೆ. ಶೃತಿ ನಾಯ್ಡು ನಿರ್ಮಾಣದ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.