Print 
ajai rao, aashika, theyige thakka maga,

User Rating: 0 / 5

Star inactiveStar inactiveStar inactiveStar inactiveStar inactive
 
hrudaya hedarike song creates craze
Hrudaya Hedarike Song from Thayige Thakka Maga

ತಾಯಿಗೆ ತಕ್ಕ ಮಗ, ಶಶಾಂಕ್ ನಿರ್ದೇಶನದ ಸಿನಿಮಾ. ಅಜೇಯ್ ರಾವ್, ಆಶಿಕಾ ರಂಗನಾಥ್, ಸುಮಲತಾ ನಟಿಸಿರುವ ಚಿತ್ರದ ರೊಮ್ಯಾಂಟಿಕ್ ಸಾಂಗ್‍ನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. ಹೃದಯಕೆ ಹೆದರಿಕೆ.. ಹೀಗೆ ನೋಡಿದರೆ..ಹುಡುಕುತಾ ಬರುವೆಯಾ ಹೇಳದೆ ಹೋದರೆ.. ಎಂದು ಶುರುವಾಗುವ ಗೀತೆ ನೋಡುಗರನ್ನು ರೊಮ್ಯಾಂಟಿಕ್ ಮೂಡ್‍ಗೆ ಕರೆದೊಯ್ಯುತ್ತಿದೆ.

ಜಯಂತ್ ಕಾಯ್ಕಿಣಿ, ಈ ಹಾಡಿನಲ್ಲಿ ಕ್ಯಾರೆಕ್ಟರ್‍ಗಳ ಗುಣವನ್ನೂ ಕಟ್ಟಿಕೊಟ್ಟಿದ್ದಾರೆ. ಆ್ಯಂಗ್ರಿ ಯಂಗ್‍ಮ್ಯಾನ್ ಹುಡುಗ, ಸಾಫ್ಟ್ ಹುಡುಗಿಯ ಗುಣ ವಿಶೇಷ ಹಾಡಿನಲ್ಲಿದೆ. ಆಶಿಕಾ ರಂಗನಾಥ್ ಹಾಡಿನಲ್ಲಿ ತುಂಬಾ ರೊಮ್ಯಾಂಟಿಕ್ ಆಗಿ ನಟಿಸಿದ್ದಾರೆ ಎಂದಿದ್ದಾರೆ ಶಶಾಂಕ್.

ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡಿನಲ್ಲಿ ಆಶಿಕಾ ಅವರ ಬೋಲ್ಡ್ ಅವತಾರಕ್ಕೆ ಚಿತ್ರರಸಿಕರು ಫಿದಾ ಆಗಿದ್ದಾರೆ.