ರಶ್ಮಿಕಾ ಮಂದಣ್ಣ, ತಾವು ಎಕ್ಸೈಟ್ ಆಗಿ ಒಪ್ಪಿಕೊಂಡಿದ್ದ ವೃತ್ರ ಚಿತ್ರದಿಂದ ಹೊರನಡೆದಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿಯೇ ಇಂಥಾದ್ದೊಂದು ಸಿನಿಮಾ ಮಾಡುವುದು ಸೂಕ್ತವಲ್ಲ ಎನಿಸಿತು. ನಿರ್ದೇಶಕರಿಗೆ ಅದನ್ನೇ ಹೇಳಿ, ಚಿತ್ರದಿಂದ ಹೊರಬಂದಿದ್ದೇನೆ. ನಿರ್ಮಾಪಕರು ಹಾಗೂ ನಿರ್ದೇಶಕರು ನನ್ನ ಭಾವನೆ ಅರ್ಥ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ಬೇರೆ ನಾಯಕಿ ಮಾಡಿದರೆ ಚೆನ್ನಾಗಿರುತ್ತೆ. ಅವರು ಆ ಪಾತ್ರಕ್ಕೆ ಜೀವ ತುಂಬುತ್ತಾರೆ ಎನ್ನುವ ಭರವಸೆ ವ್ಯಕ್ತಪಡಿಸಿ ಚಿತ್ರದಿಂದ ಹೊರನಡೆದಿದ್ದಾರೆ.
ಗೌತಮ್ ಅಯ್ಯರ್ ಎಂಬುವವರು ವೃತ್ರಕ್ಕೆ ನಿರ್ದೇಶಕರು. ಆರಂಭದಲ್ಲಿ ಕಥೆ ಕೇಳಿ ಥ್ರಿಲ್ ಆಗಿದ್ದ ರಶ್ಮಿಕಾ, ತಮ್ಮ ತಂದೆಯ ಕನಸಿನಂತೆ ಪೊಲೀಸ್ ಆಗಲಿಲ್ಲ, ಆದರೆ, ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ ಎಂದು ಖುಷಿಯಾಗಿಯೇ ಹೇಳಿಕೊಂಡಿದ್ದರು. ಈಗ ಚಿತ್ರದಿಂದ ಹೊರನಡೆದಿದ್ದಾರೆ. ನಿರ್ದೇಶಕರ ಪ್ರಕಾರ, ಸಿನಿಮಾ ಕೈಬಿಡೋಕೆ ಕಾರಣ ಡೇಟ್ಸ್ ಸಮಸ್ಯೆಯಂತೆ.
ಸದ್ಯಕ್ಕೆ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ನಿತಿನ್, ಜ್ಯೂ.ಎನ್‍ಟಿಆರ್ ಜೊತೆಗಿನ ಚಿತ್ರಗಳಿಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಇನ್ನೂ ಫೈನಲ್ ಆಗಿಲ್ಲ.