` ಉಪ್ಪಿ ಪ್ರಜಾಕೀಯಕ್ಕೆ ಹುಟ್ಟುಹಬ್ಬವೇ ಶುಭ ಮುಹೂರ್ತ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
upendra to lanch his party today
Upendra

ರಿಯಲ್ ಸ್ಟಾರ್ ಉಪೇಂದ್ರ ರಾಜಕೀಯಕ್ಕೆ ಬರುವ ಸುದ್ದಿ ಹಳೇದಾಯ್ತು. ಅವರು ಕೆಪಿಜೆಪಿ ಪಕ್ಷ ಸ್ಥಾಪಿಸಿ, ವಿಧಾನಸಭೆ ಟಿಕೆಟ್ ಹಂಚಿಕೆ ವೇಳೆ ಅಸಮಾಧಾನ ಸ್ಫೋಟಿಸಿ, ಪಕ್ಷದ ಸಂಸ್ಥಾಪಕ ಮಹೇಶ್ ಗೌಡರನ್ನು ಪಕ್ಷದಿಂದ ಉಚ್ಚಾಟಿಸಿ ಸುದ್ದಿಯಾಗಿದ್ದರು ಉಪೇಂದ್ರ. ಅದಾದ ಮೇಲೆ ಸ್ವತಃ ತಾವೇ ಮುತುವರ್ಜಿ ವಹಿಸಿ, ಉತ್ತಮ ಪ್ರಜಾಕೀಯ ಪಕ್ಷ (UPP) ಸ್ಥಾಪಿಸಿದ್ದರು. ಆ ಪಕ್ಷಕ್ಕೆ ಹುಟ್ಟುಹಬ್ಬದ ದಿನವೇ ಚಾಲನೆ ನೀಡುತ್ತಿದ್ದಾರೆ ಉಪೇಂದ್ರ.

ನಮ್ಮದು ಹಣಬಲದ ಪಕ್ಷವಲ್ಲ. ಹೀಗಾಗಿ ಅದ್ಧೂರಿ ಸಭೆ ಮಾಡುತ್ತಿಲ್ಲ. ಸರಳವಾಗಿ ಪಕ್ಷವನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ. ಬನ್ನಿ, ಆಶೀರ್ವದಿಸಿ ಎಂದಿದ್ದಾರೆ ಉಪ್ಪಿ. ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸುವ ಸಾಧ್ಯತೆಗಳಿವೆ.

Chemistry Of Kariyappa Movie Gallery

BellBottom Movie Gallery