` ಶಿವಣ್ಣ ಜೊತೆ ನಟಿಸೋಕೆ ದರ್ಶನ್ ಗ್ರೀನ್‍ಸಿಗ್ನಲ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan okays to act with shivarajkumar
Darshan, Shivarajkumar

ಶಿವರಾಜ್‍ಕುಮಾರ್ ಮತ್ತು ದರ್ಶನ್ ಕಾಂಬಿನೇಷನ್‍ನಲ್ಲಿ ಸಿನಿಮಾ ಮಾಡೋದು ಚಿತ್ರರಂಗದ ಹಲವರ ಕನಸು. ಆದರೆ, ಅದು ಊಹೆಗೂ ನಿಲುಕದ ಕಾಂಬಿನೇಷನ್. ಈ ಆ ಊಹೆಗೂ ನಿಲುಕದ ಕಾಂಬಿನೇಷನ್‍ನ ಕನಸು ಕೈಗೂಡುವ ಸಮಯ ಹತ್ತಿರವಾಗುತ್ತಿದೆ.

ಅರಸು ಖ್ಯಾತಿಯ ಮಹೇಶ್ ಬಾಬು, ಈ ಕಾಂಬಿನೇಷನ್‍ಗೆ ರೆಡಿಯಾಗಿದ್ದಾರೆ. ವಿಶೇಷ ಅಂದ್ರೆ, ಅವರಿಗೆ ಈ ಬಗ್ಗೆ ಈಗಾಗಲೇ ದರ್ಶನ್ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಒಳ್ಳೆಯ ಕಥೆ ಇದ್ರೆ ತನ್ನಿ ನಿರ್ದೇಶಕರೇ.. ಮಾಡೋಣ ಎಂದಿದ್ದಾರೆ ದರ್ಶನ್. ಹೀಗಾಗಿ ಮಹೇಶ್ ಬಾಬು ಈಗ ಕಥೆಯ ಹುಡುಕಾಟದಲ್ಲಿದ್ದಾರೆ. ಸುಮಾರು ಒಂದು ತಿಂಗಳಿಂದ ಕಥೆಗಳನ್ನು ನೋಡುತ್ತಿದ್ದಾರೆ ಮಹೇಶ್ ಬಾಬು. ಇನ್ನು ಶಿವಣ್ಣ ಅವರ ಬಗ್ಗೆ ಮಹೇಶ್ ಬಾಬುಗೂ ವಿಶ್ವಾಸವಿದೆ. ಇಂಥದ್ದೊಂದು ಪ್ರಾಜೆಕ್ಟ್ ಹೇಳಿದ್ರೆ, ಶಿವಣ್ಣ ಒಪ್ಪಿಕೊಂಡೇ ಒಪ್ಕೋತಾರೆ ಅನ್ನೋದು ಅವರ ನಂಬಿಕೆ.

ಇಬ್ಬರಿಗೂ ಸೂಕ್ತವಾದ ಕಥೆ ಬೇಕಿದೆ. ಚಿತ್ರೀಕರಣಕ್ಕೆ ಹೋಗುವ ಮೊದಲೇ ಇಬ್ಬರ ಪಾತ್ರಗಳ ಬಗ್ಗೆ ಸ್ಪಷ್ಟವಾದ ಕಲ್ಪನೆ ಇರಬೇಕು. ಯಾರ ಇಮೇಜ್‍ಗೂ ಧಕ್ಕೆಯಾಗದಂತೆ ಸಿನಿಮಾ ಮಾಡಬೇಕು. ಸ್ವಮೇಕ್ ಕಥೆಯ ಹುಡುಕಾಟದಲ್ಲಿದ್ದೇನೆ. ಸಿಗದೇ ಹೋದರೆ, ರೀಮೇಕ್ ಆದರೂ ಸೈ ಎಂದಿದ್ದಾರೆ ಮಹೇಶ್ ಬಾಬು.

ನಿರ್ಮಾಪಕರೂ ಸಿಕ್ಕಿದ್ದಾರಂತೆ. ಆದರೆ, ಸಿನಿಮಾ ಸೆಟ್ಟೇರಿದಾಗಲೇ.. ಅವರು ಯಾರು ಅನ್ನೋದು ತಿಳಿಯಲಿದೆ ಎಂದಿದ್ದಾರೆ ಮಹೇಶ್ ಬಾಬು. ಶಿವರಾಜ್ ಕುಮಾರ್ ಜೊತೆ ಈ ಹಿಂದೆ ದರ್ಶನ್ ದೇವರ ಮಗ ಚಿತ್ರದಲ್ಲಿ ನಟಿಸಿದ್ದರು. ಆದರೆ, ಆಗಿನ್ನೂ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿರಲಿಲ್ಲ. ದರ್ಶನ್ ಸ್ಟಾರ್ ಆದ ಮೇಲೆ, ಶಿವಣ್ಣ-ದರ್ಶನ್ ಕಾಂಬಿನೇಷನ್ ಸಿನಿಮಾ ಬರಬೇಕು ಅನ್ನೋದು ಅಭಿಮಾನಿಗಳ ಕನಸು. ಯಾವಾಗ ಈಡೇರಬಹುದು..?

 

Padarasa Movie Gallery

Kumari 21 Movie Gallery