` ಅಂಬಿ ಸ್ವಾಗತಕ್ಕೆ ಸಿದ್ಧರಾಗಿ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi ninge vaisaitho release date fixed
Ambi Ninge Vaisatho

ದೊಡ್ಡ ಸಿನಿಮಾ ಕಾಲ ಮತ್ತೆ ಆರಂಭವಾಗುತ್ತಿದೆ. ಈ ವರ್ಷದ ಆರಂಭದಿಂದ ದೊಡ್ಡ ಸ್ಟಾರ್‍ಗಳ ಸಿನಿಮಾಗಳು ಬಂದೇ ಇರಲಿಲ್ಲ. ಇದು ಬಾಕ್ಸಾಫೀಸ್‍ನಲ್ಲೂ ಎದ್ದು ಕಂಡಿತ್ತು. ವರ್ಷದ ಕೊನೆ ಹತ್ತಿರವಾಗುತ್ತಿರುವಾಗ ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್‍ಗೆ ಲಗ್ಗೆಯಿಡುತ್ತಿವೆ. ಅದರ ಆರಂಭ, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಿಂದ.

ಸೆಪ್ಟೆಂಬರ್ 28ಕ್ಕೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ರಿಲೀಸ್ ಆಗುತ್ತಿದೆ. ಜಾಕ್ ಮಂಜು ನಿರ್ಮಾಣದ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನವಿದೆ. ಅಂಬರೀಷ್, ಸುಹಾಸಿನಿ, ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಇದು. 

ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆದ್ರೆ, ಅದಕ್ಕೂ ಮುನ್ನ ಸೆಪ್ಟೆಂಬರ್ 16ಕ್ಕೆ ಆಡಿಯೋ ಲಾಂಚ್ ಇದೆ. ಈಗಾಗಲೇ ಹೇ ಜಲೀಲ ಹಾಡು ಸೂಪರ್ ಹಿಟ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳನ್ನು ಲಾಂಚ್ ಮಾಡುವ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಗಲಿದೆ. ಏಕೆಂದರೆ, ಇದು ಹಲವು ವರ್ಷಗಳ ನಂತರ ಅಂಬರೀಷ್ ಹೀರೋ ಆಗಿ ನಟಿಸಿರುವ ಚಿತ್ರ.

#

Gubbi Mele Bramhastra Movie Gallery

Rightbanner02_gimmick_inside

Nanna Prakara Audio Release Images