ಸೀತಾರಾಮ ಕಲ್ಯಾಣ. ಇದು ನಿಖಿಲ್ ಕುಮಾರಸ್ವಾಮಿ, ರಚಿತಾ ರಾಮ್ ಅಭಿನಯದ ಸಿನಿಮಾ. ಸಾಲು ಸಾಲು ಹಿಟ್ ಕೊಟ್ಟಿರುವ ಹರ್ಷ ನಿರ್ದೇಶನದ ಸಿನಿಮಾ. ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಆರಂಭದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ರಿಲೀಸ್ಗೂ ಮೊದಲೇ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ.
ಸೀತಾರಾಮ ಕಲ್ಯಾಣದ ಹಿಂದಿ ಡಬ್ಬಿಂಗ್ ರೈಟ್ಸ್, 5.5 ಕೋಟಿಗೆ ಮಾರಾಟವಾಗಿದೆ. ಬಾಲಿವುಡ್ನ ಆರ್ಕೆ ಸ್ಟುಡಿಯೋಸ್ ಸಿನಿಮಾವನ್ನು ಖರೀದಿಸಿದೆ.
ಕುಮಾರಸ್ವಾಮಿ, ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರಲು ನಿರ್ಧರಿಸಿದ್ದರು. ಚಿತ್ರದ ಪ್ರತಿ ಹಂತದಲ್ಲೂ ನಿಖಿಲ್ ತೊಡಗಿಸಿಕೊಂಡಿದ್ದರು. ಇದು ಸಿನಿಮಾಗೆ ಬಹಳ ಪ್ಲಸ್ ಆಯ್ತು. ಇದೆಲ್ಲದರ ಫಲವೇ ಚಿತ್ರದ ಸ್ಯಾಟಲೈಟ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಹರ್ಷ.