ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳಿಗೆ, ಗಾಸಿಪ್‍ಗಳಿಗೆ ರಕ್ಷಿತ್ ಶೆಟ್ಟಿ ತುಂಬಾ ಗಾಂಭೀರ್ಯದಿಂದ ಉತ್ತರ ಕೊಟ್ಟಿದ್ದರು. ಸಾಮಾಜಿಕ ಜಾಲತಾಣಗಳಿಗೆ ಮತ್ತೆ ವಾಪಸ್ ಬಂದು, ರಶ್ಮಿಕಾ ಅವರ ಬೆಂಬಲಕ್ಕೆ ನಿಂತಿದ್ದರು. ರಕ್ಷಿತ್ ಶೆಟ್ಟಿ, ರಶ್ಮಿಕಾ ಅವರ ಬೆಂಬಲಕ್ಕೆ ನಿಂತ ರೀತಿ, ಕಿಚ್ಚ ಸುದೀಪ್ ಅವರಿಗೆ ಇಷ್ಟವಾಗಿದೆ.
ರಕ್ಷಿತ್ ಶೆಟ್ಟಿ ಈ ವಿಷಯದಲ್ಲಿ ತುಂಬಾ ಘನತೆಯಿಂದ ಉತ್ತರ ಕೊಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಭಾವನೆಗಳನ್ನೂ ಸಾರ್ವಜನಿಕವಾಗಿಯೇ ವ್ಯಕ್ತಪಡಿಸಬೇಕಾದ ಅಗತ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಜೀವನ ಇರುತ್ತೆ. ರಕ್ಷಿತ್ ಒಳ್ಳೆಯದಾಗಲಿ ಎಂದಿದ್ದಾರೆ ಸುದೀಪ್.