ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಹೇಳಲಿಕ್ಕೆಂದೇ ಒಂದು ಡೇಟ್ ಫಿಕ್ಸ್ ಮಾಡುವ ಟ್ರೆಂಡ್ ಶುರುವಾಗಿದೆಯಾ..? ದಿ ವಿಲನ್ ತಂಡ, ಗಣೇಶನ ಹಬ್ಬದ ದಿನ ರಿಲೀಸ್ ಡೇಟ್ ಹೇಳುತ್ತೇವೆ ಎಂದಿದ್ದರೆ, ಕೆಜಿಎಫ್ ಚಿತ್ರತಂಡವೂ ರಿಲೀಸ್ ಡೇಟ್ ಹೇಳಲಿಕ್ಕೆಂದೆ ಒಂದು ಡೇಟ್ ಫಿಕ್ಸ್ ಮಾಡಿದೆ.
ಸೆಪ್ಟೆಂಬರ್ 19ರಂದು ಕೆಜಿಎಫ್ ಚಿತ್ರದ ಟ್ರೇಲರ್ ರಿಲೀಸ್ ಆಗುತ್ತಿದೆ. ಆ ದಿನವೇ ಚಿತ್ರದ ಬಿಡುಗಡೆ ದಿನಾಂಕ ಹೇಳಲಿದೆ ಕೆಜಿಎಫ್ ಟೀಂ. ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ, ಹೊಂಬಾಳೆ ಬ್ಯಾನರ್ನ ಬಹು ನಿರೀಕ್ಷಿತ ಚಿತ್ರ. ಕನ್ನಡದ ಬಿಗ್ ಬಜೆಟ್ ಚಿತ್ರವಾಗಿರೋ ಕೆಜಿಎಫ್, ಹೆಚ್ಚೂ ಕಡಿಮೆ 2 ವರ್ಷಗಳಿಂದ ವಿವಿಧ ಹಂತಗಳಲ್ಲಿ ಸಿದ್ಧವಾಗುತ್ತಿದೆ. ಸದ್ಯಕ್ಕೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
Related Articles :-