Print 
vinaya prakash, vishnu rastriya utsava,

User Rating: 0 / 5

Star inactiveStar inactiveStar inactiveStar inactiveStar inactive
 
vinaya prakash gets vishnu national awards
Vinaya Prakash

ವಿಷ್ಣುವರ್ಧನ್ ಜೊತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ವಿನಯಾ ಪ್ರಕಾಶ್, ಈ ಬಾರಿ ಡಾ. ವಿಷ್ಣುವರ್ಧನ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗುತ್ತಿದ್ದಾರೆ. ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 18ರವರೆಗೆ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಸುತ್ತಿರುವ ವಿಷ್ಣು ಸೇನಾ ಸಮಿತಿ, ವಿನಯಾ ಪ್ರಕಾಶ್ ಅವರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಿದೆ.

ವಿನಯಾ ಪ್ರಕಾಶ್, ವಿಷ್ಣುವರ್ಧನ್ ಅವರ ಜೊತೆ ನೀನು ನಕ್ಕರೆ ಹಾಲು ಸಕ್ಕರೆ, ತುಂಬಿದ ಮನೆ, ಕೋಣ ಈದೈತೆ, ನಾನೆಂದೂ ನಿಮ್ಮವನೆ, ಸಾಮ್ರಾಟ್, ಮಂಗಳ ಸೂತ್ರ.. ಹೀಗೆ ಹಲವು ಚಿತ್ರಗಳಲ್ಲಿ ವಿಷ್ಣುವರ್ಧನ್ ಜೊತೆ ನಟಿಸಿದ್ದರು. ಮಧ್ವಾಚಾರ್ಯ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ವಿನಯಾ ಪ್ರಕಾಶ್, ನಟಿಯಷ್ಟೇ ಅಲ್ಲ, ನಿರ್ಮಾಪಕಿ, ನಿರ್ದೇಶಕಿಯೂ ಹೌದು. 

ಸೆಪ್ಟೆಂಬರ್ 18ರಂದು ವಿಷ್ಣುವರ್ಧನ್ ಜಯಂತಿಯ ದಿನ, ವಿನಯಾ ಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ 3 ದಿನ ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವ ನಡೆಯಲಿದೆ.